ಕರ್ತವ್ಯ ನಿರತ ಸರ್ಕಲ್ ಇನ್ಸ್ಪೆಕ್ಟರ್ (Circle inspector) ಕತ್ತಿನ ಪಟ್ಟಿ ಹಿಡಿದು ಹಲ್ಲೆ ಮಾಡಿದ ಆರೋಪ ಹಿನ್ನೆಲೆಯಲ್ಲಿ ಮಾಜಿ ಕಾರ್ಪೊರೇಟರ್ (Corporater) ವಿ ಬಾಲಕೃಷ್ಣ ಮೇಲೆ ಕಗ್ಗಲಿಪುರ ಪೊಲೀಸ್ರು ರೌಡಿ ಶೀಟ್ ಓಪನ್ ಮಾಡಿದ್ದಾರೆ. ವಿ ಬಾಲಕೃಷ್ಣ ವಾರ್ಡ್ ನಂಬರ್ 185 ಯಲಚೇನಹಳ್ಳಿ ವಾರ್ಡ್ ಮಾಜಿ ಕಾರ್ಪೊರೇಟರ್ ಆಗಿದ್ದಾರೆ.
ಜಮೀನು ವ್ಯಾಜ್ಯ ವಿಚಾರವಾಗಿ ಮಾತನಾಡಲು ಜನವರಿ 19ರಂದು ಕಗ್ಗಲೀಪುರ ಠಾಣೆಗೆ ತೆರಳಿದ್ರು. ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ವಿಜಯ ಕುಮಾರ್ ಜೊತೆಗೆ ಮಾತಿನ ಚಕಮಕಿ ನಡೆದಿದೆ. ಸರ್ಕಲ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಕತ್ತಿನ ಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆಂದು ದೂರು ದಾಖಲಾಗಿತ್ತು.
ಇದನ್ನು ಓದಿ :- ಕಿಲ್ಲರ್ BMTC ಬಸ್ ಗೆ ಮತ್ತೊಬ್ಬರು ಬಲಿ, ಮೂವರಿಗೆ ಗಾಯ