ಸಾರಿಗೆ ನೌಕರರ ಪ್ರತಿಭಟನೆಯಿಂದಾಗಿ ಸಾರಿಗೆ ಸಂಸ್ಥೆಗೆ 8 ದಿನದಿಂದ 144 ಕೋಟಿ ರೂ. ನಷ್ಟ ಉಂಟಾಗಿದೆ.
ಸಾರಿಗೆ ಇಲಾಖೆ ನೌಕರರು ಕಳೆದ 8 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಯುಗಾದಿ ಹಬ್ಬದ ದಿನ ಅತೀ ಹೆಚ್ಚು ವಹಿವಾಟು ನಡೆಸುತ್ತಿದ್ದ ಸಾರಿಗೆ ಸಂಸ್ಥೆಗೆ ಭಾರೀ ನಷ್ಟ ಉಂಟಾಗಿದೆ.
ಯುಗಾದಿ ಹಬ್ಬದ 2 ದಿನ ಸಾಮಾನ್ಯವಾಗಿ ಕೆಎಸ್ಸಾರ್ಟಿಸಿಗೆ 44 ಕೋಟಿ ರೂ. ಆದಾಯ ಆಗುತ್ತಿತ್ತು. ಆದರೆ ಈ ಬಾರಿ ಯಾವುದೇ ಬಸ್ ಗಳು ಹೊರಗೆ ಬಂದಿಲ್ಲ. ಕೆಎಸ್ಸಾರ್ಟಿಸಿಯಿಂದ ದಿನಕ್ಕೆ ಬರುತ್ತಿದ್ದ 7 ಕೋಟಿ ರೂ. ಆದಾಯಕ್ಕೆ ಕತ್ತರಿ ಬಿದ್ದಿದೆ.
ಸಾರಿಗೆ ಇಲಾಖೆಯ 4 ನಿಗಮಗಳಿಂದ ಪ್ರತಿ ದಿನ 3.5 ಕೋಟಿ ರೂ. ವಹಿವಾಟು ನಡೆಸುತ್ತಿದ್ದು, ಅದಕ್ಕೆ ಖೋತಾ ಬಿದ್ದಿದೆ. ಬಿಎಂಟಿಸಿಯಲ್ಲಿ ದಿನಕ್ಕೆ ಸುಮಾರು 3 ಕೋಟಿ ರೂ. ಬರುತ್ತಿತ್ತು ಎಂದು ಅಧಿಕಾರಿ ಮೂಲಗಳು ತಿಳಿಸಿವೆ.