ಕೋಲಾರ : ರಾಕೇಶ್ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಹಾಗೂ ಸೂಕ್ತ ತನಿಖೆಗೆ ಆಗ್ರಹಿಸಿ ಗ್ರಾಮಸ್ಥರು ಕಾಲ್ನಡಿಗೆ ಜಾಥಾ ನಡೆಸಿದರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿ, ಚಲ್ದಿಗಾನಹಳ್ಳಿ ಗ್ರಾಮದಿಂದ ತಾಲ್ಲೂಕು ಕಚೇರಿಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು.
ಜುಲೈ 18 ರಂದು ಅನುಮಾನಾಸ್ಪದವಾಗಿ ಕೃಷಿ ಹೊಂಡದಲ್ಲಿ ಅನುಮಾನಸ್ಪದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಮೃತ ಯುವಕ ಚಲ್ದಿಗಾನಹಳ್ಳಿ ಗ್ರಾಮದ ರಾಕೇಶ್ ಎಂದು ಗುರುತಿಸಲಾಗಿತ್ತು. 17 ವರ್ಷದ ರಾಜೇಶ್ ಚಿಂತಾಮಣಿ ಕಾಲೇಜಿನಲ್ಲಿ ಡಿಪ್ಲೋಮೋ ಓದುತ್ತಿದ್ದ. ನಮ್ಮ ಮಗನನ್ನು ಕೊಲೆ ಮಾಡಲಾಗಿದೆಯೆಂದು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈಗಾಗಲೇ ಕೊಲೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನು ಬಂದಿಸುವಂತೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಸಾರ್ವಜನಿಕರು ಜಾಥಾ ನಡೆಸಿದ್ರು. ಕಾಲ್ನಡಿಗೆ ಜಾಥಾದಲ್ಲಿ ವಿವಿಧ ದಲಿತಪರ,ಪ್ರಗತಿಪರ, ಹಾಗೂ ವಿದ್ಯಾರ್ಥಿ ಸಂಘಟನೆಗಳು ಭಾಗಿಯಾಗಿದ್ರು. ಮುನ್ನೆಚ್ಚರಿಕೆಯಿಂದ ಯಾವುದೇ ಅಹಿತಕರ ಘಟನೆಗಳಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.