ಬೆಂಗಳೂರು : ಕೆಇಎ ಕೆಸಿಇಟಿ ಕೌನ್ಸಿಲಿಂಗ್ ಮೂಲಕ ಕರ್ನಾಟಕದ 90 ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ಪ್ರವೇಶಾತಿ ಸೀಟ್‌ಮ್ಯಾಟ್ರಿಕ್ಸ್ ಸಂಬಂಧಿಸಿದಂತೆ, ಅಂತಿಮ ಹಂಚಿಕೆ ಪಟ್ಟಿಯಿಂದ ಕೈಬಿಟ್ಟಿದ್ದ 9,000 ಸೀಟುಗಳನ್ನು ಉನ್ನತ ಶಿಕ್ಷಣ ಇಲಾಖೆ ಮತ್ತೆ ಸೇರಿಸಿದ್ದು ಇಷ್ಟೂ ಸೀಟುಗಳು ಈಗ ಹಂಚಿಕೆಗೆ ಲಭ್ಯವಾಗಲಿವೆ.
ಹೌದು ರಾಜ್ಯದ ಹಲವು ಎಂಜಿನಿಯರಿಂಗ್ ಕಾಲೇಜುಗಳು ನಿರಾಕ್ಷೇಪಣಾ ಪ್ರಮಾಣ ಪತ್ರ ಸೇರಿದಂತೆ ಕೆಲವು ದಾಖಲೆಗಳನ್ನು ಒದಗಿಸಿಲ್ಲ ಎನ್ನುವ ಕಾರಣಕ್ಕೆ ಅವುಗಳನ್ನು ಸೀಟು ಹಂಚಿಕೆ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು. ಆದರೆ ಈಗ ಉನ್ನತ ಶಿಕ್ಷಣ ಇಲಾಖೆ ಶುಕ್ರವಾರ ಷರತ್ತು ವಿಧಿಸಿ ಸೀಟು ಹಂಚಿಕೆಗೆ ಒಪ್ಪಿಗೆ ಸೂಚಿಸಿದೆ. ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಾಹಿತಿ ನೀಡಿದೆ …
ವರದಿ ; ವರ್ಷಿತ ತಾಕೇರಿ