ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ 214 ನೇ ಫ್ಲವರ್ ಶೋ(Flower Show)ಗೆ ಸಿಎಂ ಸಿದ್ದರಾಮಯ್ಯ(CM Siddaramaiah) ಚಾಲನೆ ನೀಡುವ ಮೂಲಕ ಆರಂಭವಾಗಲಿದೆ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 4 ರಿಂದ ಈ ಬಾರಿ ವಿಧಾನಸೌಧ ಹಾಗೂ ಕೆಂಗಲ್ ಹನುಮಂತಯ್ಯರವರ ಕಾನ್ಸೆಪ್ಟ್ ನಲ್ಲಿ ಫ್ಲವರ್ ಶೋ ಆಯೋಜಿಸಲಾಗಿದ್ದು, ನಾಳೆಯಿಂದ ಆರಂಭವಾಗಿ ಆಗಸ್ಟ್ 15ರವರೆಗೂ ಫ್ಲವರ್ ಶೋ ನಡೆಯಲಿದೆ. ಕೆಂಗಲ್ ಹನುಮಂತಯ್ಯ ಅವರ 14 ಅಡಿ ಪ್ರತಿಮೆ ಫಲಪುಷ್ಪ ಪ್ರದರ್ಶನಕ್ಕೆ ಅನಾವರಣವಾಗಲಿದೆ. ಈ ಬಾರಿ ಫ್ಲವರ್ ಶೋಗೆ 2 ಕೋಟಿ ಅಧಿಕ ವೆಚ್ಚ ತಗುಲುವ ಸಾಧ್ಯತೆಯಿದ್ದು, ಭದ್ರತೆ ದೃಷ್ಟಿಯಿಂದ 200 ಸಿಸಿ ಟಿವಿ ಕ್ಯಾಮರಾಗಳನ್ನ ಅಳವಡಿಕೆ ಮಾಡಲಾಗುತ್ತೆ. 300-400 ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಈ ಸಲ 10 ರಿಂದ 12 ಲಕ್ಷ ಜನ ಬರುವ ಸಾಧ್ಯತೆ.
ಈ ಬಾರಿಯ ಲಾಲ್‌ಬಾಗ್ ಫ್ಲವರ್ ಶೋಗೆ 2.50 ಕೋಟಿ ರೂ.ಗಳು ಫಲಪುಷ್ಪಗಳನ್ನು ವೆಚ್ಚವಾಗಲಿದೆ ಎಂದು ಲಾಲ್‌ಬಾಗ್ ಜಂಟಿ ನಿರ್ದೇಶಕರಾದ ಸತೀಶ್ ಮಾಹಿತಿ ನೀಡಿದ್ದಾರೆ