ನವದೆಹಲಿ : ಪೊಲೀಸ್ ಸಿಬ್ಬಂದಿ ಸಂಬಳ ನಿಲ್ಲಿಸಿರುವುದು ಬೇರೆ ಕಾರಣದಿಂದ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಆಡಳಿತ ವ್ಯವಸ್ಥೆ ಹಾಗೂ ಬೇರೆ ಬೇರೆ ಕಾರಣಗಳಿಂದ ಪೊಲೀಸ್ ಸಿಬ್ಬಂದಿಗಳ ಸಂಬಳ ನಿಲ್ಲಿಸಲಾಗುತ್ತಿದೆ. ನೌಕರರ ಸಂಬಳ ತಡೆದು ಗ್ಯಾರಂಟಿ ಯೋಜನೆ ನೀಡುವ ಅಗತ್ಯವಿಲ್ಲ ಎಂದರು.
ಗ್ಯಾರಂಟಿ ಯೋಜನೆಗೆ ಎಷ್ಟು ಹಣ ಬೇಕೋ ಅಷ್ಟು ಸರ್ಕಾರ ಬಜೆಟ್ ನಲ್ಲಿ ಮೀಸಲಿಟ್ಟಿದೆ. ಗ್ಯಾರಂಟಿ ಯೋಜನೆಗಾಗಿ ಪೊಲೀಸ್ ಸಿಬ್ಬಂದಿ ಸಂಬಳ ನಿಲ್ಲಿಸಿಲ್ಲ ಎಂದರು. ಸ್ಥಳೀಯ ಶಾಸಕರು, ನಾಯಕರಿಂದ ಆಕ್ಷೇಪ ಬಂದ ಹಿನ್ನೆಲೆ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ತಡೆ ನೀಡಲಾಗಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.