ಬೆಂಗಳೂರು : ಶ್ರೀ ವಾಸವಿ ಕಾಂಡಿಮೆಂಟ್ಸ್ ವತಿಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ 2024 ಜನವರಿ 5 ರಿಂದ 9 ರವರೆಗೆ 24ನೇ ಆವೃತ್ತಿಯ ‘ಅವರೆ ಬೇಳೆ ಮೇಳ’ ನಡೆಯುತ್ತಿದೆ.
ಸಿಟಿ ಮಂದಿಗೆ ವೀಕೆಂಡ್‌ನಲ್ಲಿ ಎಂಜಾಯ್ ಮಾಡೋದಕ್ಕೆ ಅವರೆ ಮೇಳ ಸಿದ್ದಗೊಂಡಿದೆ. ಅವರೆಮೇಳದಲ್ಲಿ ವೈವಿಧ್ಯಮಯ ಅವರೆ ದೋಸೆ, ಪಾಯಸ, ವಡೆ, ಮಂಚೂರಿಯನ್, ಪಫ್, ಹಲ್ವಾ, ಅವರೆ ಐಸ್‌ಕ್ರೀಂ ಮತ್ತು ನೂರಕ್ಕೂ ಹೆಚ್ಚು ತಿನಿಸುಗಳು ಲಭ್ಯವಿರುತ್ತವೆ.
ಕಳೆದ ವರ್ಷ, ಫುಡ್ ಸ್ಟ್ರೀಟ್‌ನಲ್ಲಿ ನವೀಕರಿಸಿದ್ದು ಹೆಚ್ಚಿನ ಜನಸಂದಣಿಯ ಕಾರಣ, ಅದನ್ನು ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ವರ್ಷ ಸುಮಾರು 40 ಸ್ಟಾಲ್‌ಗಳಿದ್ದರೆ, ಈ ವರ್ಷ ಸುಮಾರು 80 ಸ್ಟಾಲ್‌ಗಳಿವೆ ಎಂದು ವರದಿಯಾಗಿದೆ.