ಬೆಂಗಳೂರು :ನಗರದ ಅರಮನೆ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಯುವ ಕಾಂಗ್ರೆಸ್ ರಾಷ್ಟ್ರೀಯ ಸಮಾವೇಶ ನಡೆಯಲಿದೆ ಎಂದು ವರದಿಯಾಗಿದೆ.
“ಉತ್ತಮ ಭಾರತದ ಅಡಿಪಾಯ” ಘೋಷವಾಕ್ಯದೊಂದಿಗೆ ಮೂರು ದಿನಗಳ ಕಾಲ ಯುವ ಕಾಂಗ್ರೆಸ್ ಸಮಾವೇಶವನ್ನು ಆಯೋಜಿಸಿದ್ದಾರೆ. ಕಾರ್ಯಕ್ರಮ ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಈ ಕಾರ್ಯಕ್ರಮ ಕರ್ನಾಟಕದಲ್ಲಿ ನಡೀತಾ ಇದೆ ಹಾಗಾಗಿ ನಾನು ಕನ್ನಡದಲ್ಲೇ ಮಾತಾಡ್ತೀನಿ ಎಂದು ಹೇಳಿಕೆ ನೀಡಿದ ಬೆನ್ನಲ್ಲೆ ಕಾರ್ಯಕರ್ತರು ವಿಷಲ್ ಹಾಕಿ ಸಂಭ್ರಮಿಸಿದ್ದಾರೆ. ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು ಬಹಳ ಸಂತೋಷವಾಗ್ತಿದೆ. ಅದಕ್ಕೆ ಶ್ರೀನಿವಾಸ್ ರವರಿಗೆ ಅಭಿನಂದಿಸುತ್ತೇನೆ ಎಂದಿದ್ದಾರೆ. ಬೆಲೆ ಏರಿಕೆ ಮಾಡಿದ್ದಾರೆ. ಇದರಿಂದ ಬಡವರು ತತ್ತರಿಸಿ ಹೋಗಿದ್ದಾರೆ. ನಿರುದ್ಯೋಗ ಸಮಸ್ಯೆಯಿಂದ ಬಳಳುತ್ತಿರುವ ಪರಿಸ್ಥಿತಿ ಮೋದಿ ಸರ್ಕಾರದಿಂದ ಆಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಾವು ಅಧಿಕಾರಿಕ್ಕೆ ಬಂದ ಮೇಲೆ ಸಾಮಾಜಿಕ ಸುಧಾರಣೆ ಆಗಿದೆ. ಎಲ್ಲಾ ಜಾತಿ ಧರ್ಮದವರು ಕೂಡ ನೆಮ್ಮದಿ ಇಂದ ಬದುಕುವಂತೆ ಮಾಡಿದ್ದೀವಿ. ಆದ್ರೆ ಕೆಲ ಬಿಜೆಪಿ, ಭಜರಂಗದಳ, ಹಿಂದೂ ಕಾರ್ಯಕರ್ತರು ನೆಮ್ಮದಿಯನ್ನು ಹಾಳು ಮಾಡೋಕೆ ನೋಡ್ತಾ ಇದಾರೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಆದಿ ಕವಿ ಹೇಳಿದ್ದಾರೆ ಮನುಷ್ಯ ಜಾತಿ ತಾನೊಂದೆ ವಲಂ ಅಂತಾ. ಮನುಷ್ಯ ಜಾತಿ ಎಲ್ಲರಿಗೂ ಒಂದೇ. ಪ್ರತಿಯೊಬ್ಬರೂ ಕೂಡ ಸಂವಿಧಾನ ಓದಲೇಬೇಕು. ಒಂದು ಸಮಾಜದ ಎಲ್ಲಾ ಸಮಸ್ಯೆಗಳಿಗೆ ನಮ್ಮ ಸಂವಿಧಾನ ಉತ್ತರ ಕೊಡುತ್ತೆ. ಯಾವುದೇ ಮನುಷ್ಯ, ಅಧಿಕಾರಕ್ಕೆ ಬಂದಾಗ ಸಂವಿಧಾನವನ್ನು ಪಾಲಿಸುವುದು ಪ್ರತಿಯೊಂದು ಸರ್ಕಾರದ ಜವಾಬ್ದಾರಿಯಾಗಿದೆ. ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ಬದ್ದವಾಗಿರುವ ಪಕ್ಷ. ಸಂವಿಧಾನ ಜಾರಿಗೆ ಬಂದಾಗಿನಿಂದ ಕಾಂಗ್ರೆಸ್ ಸರ್ಕಾರ ಸಂವಿಧಾನ ಬದ್ಧವಾಗಿಯೇ ನಡೆದುಕೊಳ್ಳುತ್ತಿದೆ ಎಂದಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಸಮಾವೇಶದಲ್ಲಿ ಭಾಗಿಯಾಗಿರುವ ವಿವಿಧ ರಾಜ್ಯಗಳ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಗೂ ಯೂತ್ ಕಾಂಗ್ರೆಸ್ ಪ್ರತಿನಿಧಿಗಳು ಆಗಮಿಸಲಿದ್ದಾರೆ