ಬೆಂಗಳೂರು : ಆಗಸ್ಟ್ 2 ರಂದು ಹೈಕಮಾಂಡ್ ನಾಯಕರ ಜೊತೆ ರಾಜ್ಯ ನಾಯಕರ ಸಭೆ ಆಯೋಜನೆ ಆಗಿದೆ.ಈ ಹಿನ್ನಲೆ
ರಾಜ್ಯದ 37 ನಾಯಕರಿಗೆ ‘ಕೈ” ಹೈಕಮಾಂಡ್ ನಾಯಕರು ಆಹ್ವಾನ ಕೊಟ್ಟಿದ್ದಾರೆ.
ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಗೂ ಕೂಡ ಸಭೆಗೆ ಆಹ್ವಾನ ವಿದೆ.ಈ ಸಭೆಯಲ್ಲಿ ಪ್ರಮುಖವಾಗಿ ಶಾಸಕರ ಅಸಮಧಾನದ ವಿಚಾರವಾಗಿ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ,ಡಿಕೆಶಿವಕುಮಾರ್ ಜೊತೆ ಚರ್ಚೆ ನಡೆಸಲಿದ್ದಾರೆ. ಇನ್ನೂ ಮುಂದಿನ ಲೋಕಸಭಾ ಚುನಾವಣೆ ತಯಾರಿ ವಿಚಾರವಾಗಿ ನಡೆಯಲಿರುವ ಚರ್ಚೆಯಲ್ಲಿ ರಾಜ್ಯದಿಂದ ಅತಿ ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ತಯಾರಿಗಳ ಕುರಿತು ಚರ್ಚೆ ನಡೆಸಲಿದ್ದಾರೆ.ಈ ಹಿನ್ನಲೆ ಈ ಸಭೆ ಮಹತ್ವ ಪಡೆದುಕೊಂಡಿದೆ.
ಇನ್ನೂ ರಾಜ್ಯದ ಯಾವೆಲ್ಲ ನಾಯಕರಿಗೆ ಆಹ್ವಾನ ಬಂದಿದೆ ಎಂದು ನೋಡೊದಾದ್ರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಚಿವರಾದ ಡಾ.ಜಿ.ಪರಮೇಶ್ವರ, ಎಂ.ಬಿ. ಪಾಟೀಲ್, ಸತೀಶ ಜಾರಕಿಹೋಳಿ, ರಾಮಲಿಂಗಾ ರೆಡ್ಡಿ,ಈಶ್ವರ ಖಂಡ್ರೆ, ಎಚ್.ಕೆ. ಪಾಟೀಲ್, ಕೆ.ಎಚ್. ಮುನಿಯಪ್ಪ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್, ಎನ್.ಚೇಲುರಾಯಸ್ವಾಮಿ, ಹೆಚ್.ಸಿ. ಮಹದೇವಪ್ಪ, ಶಿವಾನಂದ ಪಾಟೀಲ, ಎಸ್.ಎಸ್.ಮಲ್ಲಿಕಾರ್ಜುನ್, ಮಧು ಬಂಗಾರಪ್ಪ,ಎನ್.ಎಸ್.ಬೋಸರಾಜು, ಪ್ರಿಯಾಂಕ್ ಖರ್ಗೆ,ಕೆಪಿಸಿಸಿ ಕಾರ್ಯಧ್ಯಕ್ಷರಾದ ಸಲೀಂ ಅಹಮದ್, ಚಂದ್ರಪ್ಪ,ಶಾಸಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಬಿ.ಕೆ. ಹರಿಪ್ರಸಾದ್, ಆರ್.ವಿ.ದೇಶಪಾಂಡೆ, ವಿನಯ್ ಕುಲಕರ್ಣಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಭಾಪತಿ ಬಿ.ಎಲ್.ಶಂಕರ್,ಸಂಸದರಾದ ಡಿ.ಕೆ.ಸುರೇಶ್, ಜಿ.ಸಿ. ಚಂದ್ರಶೇಖರ್,ಹನುಮಂತಯ್ಯ, ರಾಜ್ಯ ವಲಯವಾರು ಉಸ್ತುವಾರಿಗಳಾದ ಶ್ರೀಧರ್ ಬಾಬು, ಮಯೂರ ಜಯಕುಮಾರ್, ರೋಜಿ ಜಾನ್, ಅಭಿಷೇಕ್ ದತ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆ ಬಳಿಕ ಎಲ್ಲ ೩೪ ಸಚಿವರ ಜೊತೆ ಎರಡನೇ ಹಂತದ ಸಭೆಯು ನಡೆಯಲಿದೆ ಎಂದು ಹೇಳಲಾಗಿದೆ.
ವರದಿ :ಬಸವರಾಜ ಹೂಗಾರ