ಬೆಂಗಳೂರು : ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಸಲುವಾಗಿ ದೂರದ ಊರಿಂದ ಬೆಂಗಳೂರಿಗೆ ಅವನು ತನ್ನ ಕಾರಿನಲ್ಲಿ ಬಂದಿದ್ದ. ಆದ್ರೆ ಅವನ ಗ್ರಹಚಾರ ಕೆಟ್ಟಿತ್ತು ಅನ್ಸುತ್ತೆ…ನಗರದ ಏರಿಯಾದಲ್ಲಿ ಅಡ್ಡಗಟ್ಟಿದ ಜನರು ಸಖತ್ ಗೂಸಾ ಕೊಟ್ಟಿದ್ದಾರೆ. ಇಷ್ಟಕ್ಕೂ ಅಲ್ಲಿ ನಡೆದಿದ್ದೇನು…,? ಯಾರವನು…? ಘಟನೆಗೆ ಕಾರಣವಾದ್ರೂ ಎಂಥದ್ದು ಅನ್ನೋದರ ಪಕ್ಕಾ ಮಾಹಿತಿ ಇಲ್ಲಿದೆ ಓದಿ
ಈ ಪೋಟೊದಲ್ಲಿರುವ ಯುವಕನ ಹೆಸರು ವಿಷ್ಣು, ಮೂಲತಃ ಮೈಸೂರಿನ ಕುವೆಂಪುನಗರ ನಿವಾಸಿ…ಆಗಸ್ಟ್ ಒಂದರಂದು ಮೈಸೂರಿನಿಂದ ಬೆಂಗಳೂರಿನ ಜಯನಗರಕ್ಕೆ ಸ್ನೇಹಿತರ ಭೇಟಿಗೆ ಅಂತೇಳಿ ತನ್ನ ಕಾರಿನಲ್ಲಿ ಬಂದಿದ್ದಾನೆ.ಹೀಗೆ ಬಂದವನು ಬಂದ ಪುಟ್ಟ..ಹೋದ ಪುಟ್ಟ ಎನ್ನದೇ ಬಹುದಿನಗಳ ನಂತ್ರ ಸ್ನೇಹಿತರ ಭೇಟಿ ಮಾಡಿದ ಖುಷಿಯಲ್ಲಿ ಭರ್ಜರಿ ಪಾರ್ಟಿ ಮಾಡಿದ್ದಾನೆ. ಆ ಬಳಿಕ ಕುಡಿದ ನಶೆಯಲ್ಲೇ ಕಾರು ಡ್ರೈವ್ ಮಾಡಿಕೊಂಡು ಜಯನಗರದ ನಂದಿನಿ ಜಂಕ್ಷನ್ ಬಳಿ ಬಂದು ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅದೃಷ್ಟ ವಶಾತ್ ಆ ಪಾದಚಾರಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರೆ…ಕಾರಿನಿಂದ ಇಳಿದು ಬಂದ ವಿಷ್ಣು ಕುಡಿದ ನಶೆಯಲ್ಲಿ ಪಾದಚಾರಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.
ಅಕ್ಷರಶಃ ಅಲ್ಲಿನ ಸ್ಥಳೀಯ ಜನರು ಆಕ್ರೋಶ ಕೊಂಡಿದ್ದರು…ಕುಡಿದ ನಶೆಯಲ್ಲಿ ಪಾದಚಾರಿಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಲ್ಲದೇ….ಆತನ
ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದ ಕಾರು ಚಾಲಕ ವಿಷ್ಣುನನ್ನ ಪ್ರಶ್ನಿಸಲು ಮುಂದಾಗಿದ್ದಾರೆ. ಈ ವೇಳೆ ಕಾರು ಚಾಲಕ ವಿಷ್ಣು ಸ್ಥಳೀಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಧ್ಯದ ಕೈ ಬೆರಳು ತೋರಿಸಿ ಮತ್ತಷ್ಟು ಪ್ರಚೋದಿಸಿದ್ದಾನೆ. ಈ ವೇಳೆ ತಾಳ್ಮೆ ಕಳೆದುಕೊಂಡ ಸಾರ್ವಜನಿಕರು ಕಾರು ಚಾಲಕ ವಿಷ್ಣುನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಜಯನಗರ ಟಾಫಿಕ್ ಪೊಲೀಸರು ಘಟನಾ ಸ್ಥಳಕ್ಕೆ ಎಂಟ್ರಿಕೊಟ್ಟು , ಹಲ್ಲೆಗೊಳಗಾಗಿದ್ದ ಕಾರು ಚಾಲಕ ವಿಷ್ಣುನ ವಶಕ್ಕೆ ಪಡೆದು, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.