ಬೆಂಗಳೂರು: ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರು ಇನ್ಮುಂದೆ ನಮ್ಮ ಹೆಮ್ಮೆ ನಂದಿನಿಯ ಪ್ರಚಾರ ರಾಯಭಾರಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ.
ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರೇ ಖುದ್ದು ಶಿವರಾಜ್‌ಕುಮಾರ್ ಅವರನ್ನ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಭೀಮಾ ನಾಯ್ಕ್ ಅವರು, ಕರುನಾಡ ಚಕ್ರವರ್ತಿ, ಹೀರೋ ಶಿವರಾಜ್ ಕುಮಾರ್ “ನಂದಿನಿ” ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಒಪ್ಪಿಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಲಾಗಿದೆ.
ಅವರಿಗೆ ಕೆ.ಎಂ.ಎಫ್ ಮತ್ತು ಸಮಸ್ತ ಕರ್ನಾಟಕ ರೈತರ ಹಾಗೂ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ತಿಳಿಸಿದ್ದಾರೆ.
1996ರಲ್ಲಿ ಡಾ. ರಾಜ್‌ಕುಮಾರ್, 2009ರಲ್ಲಿ ಪುನೀತ್ ರಾಜ್‌ಕುಮಾರ್, 2023ರಲ್ಲಿ ಅಂದ್ರೆ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಂದಿನಿಯ ಪ್ರಚಾರ ರಾಯಭಾರಿಯಾಗುತ್ತಿದ್ದಾರೆ.