ಹುಬ್ಬಳ್ಳಿ: ಭಜರಂಗದಳದ ಕಾರ್ಯಕರ್ತನಾಗಿದ್ದಕ್ಕೆ ನನಗೆ ಷಡ್ಯಂತ್ರ ಮಾಡಿ ನನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಿಸಿದ್ದರು. ಈಗ ಬಿಡುಗಡೆಯಾಗಿದ್ದೇನೆ. ಈ ಹಿಂದಿನ ಕೇಸ್ ಎಲ್ಲ ಖುಲಾಸೆಯಾಗಿದೆ ಎಂದು ಕಾರಾಗೃಹದಿಂದ ಬಿಡುಗಡೆಯಾದ ಶ್ರೀಕಾಂತ್ ಪೂಜಾರಿ ಹೇಳಿದರು.
ಬಿಡುಗಡೆಯಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶುಕ್ರವಾರ ನನಗೆ ಕೆಲಸ ಇದೆ ನಿನ್ನ ಹತ್ತಿರ ಎಂದು ಹೇಳಿ ಕರೆದುಕೊಂಡು ಹೋಗಿ ನಿನ್ನ ಮೇಲೆ ಕೇಸ್ ಇದೆ ಅಂತ ಜೈಲಿಗೆ ಹಾಕಿದ್ದಾರೆ ಎಂದರು.
ಈ ಹಿಂದೆ ಇದ್ದ ಎಲ್ಲ ಕೇಸ್ ಖುಲ್ಲಾ ಆಗಿದೆ. ಹೀಗಿದ್ದರೂ ಈ ಕೇಸ್ ನಲ್ಲಿ ನನ್ನನ್ನು ಬಂಧಿಸಿದ್ದಾರೆ. ಆದರೆ ಈಗ ಕೋರ್ಟ್ ತೀರ್ಪು ನೀಡಿ ಬಿಡುಗಡೆ ಮಾಡಿರುವುದು ಖುಷಿ ತಂದಿದೆ ಎಂದು ಅವರು ಹೇಳಿದರು.