ಬೆಂಗಳೂರು: ಹಲವು ವರ್ಷಗಳಿಂದ ಕೆಲಸ ಮಾಡ್ತಿದ್ದ ಅಟಲ್ ಜನಸ್ನೇಹಿ ಆಪರೇಟರ್ ಗಳನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು. ಕೋವಿಡ್ ಸಮಯದಲ್ಲೂ ಕೆಲಸ ಮಾಡಿದ್ದೇವೆ, ಈಗ ಏಕಾಏಕಿ ಕೆಲಸದಿಂದ ತೆಗೆಯಲು ಪ್ಲಾನ್ ಆಗಿದೆ. ನಮಗೆ ಆದೇಶ ಪ್ರತಿ ತೋರಿಸೋವರೆಗೂ ಪ್ರತಿಭಟನೆ ನಿಲ್ಲಿಸಲ್ಲ ಅಂತಾ ಪಟ್ಟು ಹಿಡಿದಿದ್ದಾರೆ.
ಇದೀಗ ಕೆಲಸದಿಂದ ಸ್ಥಗಿತ ಮಾಡಿದ್ದಕ್ಕೆ ಆಕ್ರೋಶ ಹೊರಹಾಕಿ, ಕೆಲಸದಿಂದ ತೆಗೆಯಲು ಕೊಟ್ಟಿರೋ ಆದೇಶ ತೋರಿಸಿ ಅಂತಾ ಪಟ್ಟು ಹಿಡಿದು, ಕಂದಾಯ ಇಲಾಖೆಗೆ ಪತ್ರ ಬರೆದು ಪ್ರತಿಭಟನೆ ಮಾಡುತ್ತಿದ್ದಾರೆ.
ಅಲ್ಲದೇ ಕಳೆದು ತಿಂಗಳ ಸಂಬಳ ಬಾಕಿ ಇದ್ದು, ಎಷ್ಟೋ ಜನರು ಅಂಗವಿಕಲರು, ವಿಧವೆಯರು, ಬಡವರು ಬೀದಿಪಾಲಗಿದ್ದೇವೆ. ಇದೇ ಕೆಲಸವನ್ನು ಅವಲಂಬಿಸಿ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದೇವೆ. ಈಗ ತಾವು ನಮ್ಮನ್ನು ಕೆಲಸದಿಂದ ಸ್ಥಗಿತಗೊಳಿಸಿದಕ್ಕೆ ನಾವು ಬೀದಿಪಾಲಗುವ ಪರಿಸ್ಥಿತಿ ಬಂದೋದಗಿದೆ ಎಂದು ರಾಜ್ಯದ ಎಲ್ಲ ಆಟಲ್ ಜೀ ಜನಸ್ನೇಹಿ ಕೇಂದ್ರದ ಅಪರೇಟಗಳು ತಮ್ಮ ಅಳಲನ್ನು ತೋಡಿಕೊಂಡರು