ಬೆಂಗಳೂರು: ನಗರದಲ್ಲಿ ಕ್ಯಾಬ್ ನಲ್ಲಿ ಪರ್ಸನಲ್ ವಿಚಾರ ಮಾತನಾಡುವ ಮುನ್ನ ಎಚ್ಚರವಿರಲಿ. ಯಾಕಂದ್ರೆ ಕ್ಯಾಬ್ ನಲ್ಲಿ ಪರ್ಸನಲ್ ವಿಚಾರ ಮಾತನಾಡಿ ಲಕ್ಷಲಕ್ಷ ಕಳೆದುಕೊಂಡು ಮಹಿಳೆಯ ಕಥೆ ಹೇಳುತ್ತೇವೆ ಕೇಳಿ.
ಸಿನಿಮೀಯ ಶೈಲಿಯಲ್ಲಿ ಮಹಿಳೆಗೆ ವಂಚಿಸಿದ ಖತರ್ನಾಕ್ ಕ್ಯಾಬ್ ಚಾಲಕ. 2022 ನವೆಂಬರ್ ನಲ್ಲಿ ಕ್ಯಾಬ್‌ನಲ್ಲಿ ಪ್ರಯಾಣ ಮಾಡಿದ್ದ ಮಹಿಳೆ ಇಂದಿರಾನಗರದಿಂದ ಬಾಣಸವಾಡಿವರೆಗೆ ಕ್ಯಾಬ್ ಬುಕ್ ಮಾಡಿ ಪ್ರಯಾಣ. ಕ್ಯಾಬ್‌ನಲ್ಲಿ ಮಹಿಳೆಯನ್ನ ಪರಿಚಯಿಸಿಕೊಂಡಿದ್ದ ಚಾಲಕ ಕಿರಣ್ ಕುಮಾರ್. ಇದೇ ವೇಳೆ ಕ್ಲಾಸ್ ಮೇಟ್ ಬಗ್ಗೆ ಮಾತನಾಡಿದ್ದ ಮಹಿಳೆ ಆಗ ಆ. ಮಹಿಳೆಯ ಮಾತುಗಳನ್ನ ಕಳ್ಳ ಕಿವಿಯಿಂದ ಆಲಿಸಿದ್ದ ಅಸಾಮಿ ಚಾಲಕ ಆಮೇಲೆ
ಕೆಲ ದಿನಗಳ ನಂತರ ಮಹಿಳೆಗೆ ಕ್ಯಾಬ್ ಚಾಲಕ ಮೆಸೇಜ್ ಮಾಡಿದ್ದ ..ಮುಂದೇನಾಯ್ತು ಅಂತೀರಾ ಹೇಳ್ತೀವಿ ಕೇಳಿ.
ನಾನು ನಿಮ್ಮ ಬಾಲ್ಯ ಸ್ನೇಹಿತ ಎಂದು ಮೆಸೇಜ್ ಹಾಕಿದ್ದ ಅಸಾಮಿ ಕಿರಣ್. ಹಳೇ ಸ್ನೇಹಿತ ಎಂದು ಪೋನ್‌ನಲ್ಲಿ ಕಂಟ್ಯಾಕ್ಟ್ ಬೆಳೆಸಿದ್ದ ಅಸಾಮಿ. ನಂತರ ತನಗೆ ಹಣಕಾಸು ತೊಂದರೆ ಇದ್ದು, ಸ್ವಲ್ಪ ಸಹಾಯ ಬೇಕು ಎಂದಿದ್ದ. ಬಾಲ್ಯ ಸ್ನೇಹಿತ ಅಂತಾ ಕನಿಕರ ತೋರಿಸಿ ಹಣ ಕಳಿಸಿದ್ದ ಮಹಿಳೆ.
ಸುಮಾರು 22 ಲಕ್ಷ ಹಣ ಕಳಿಸಿದ್ದ ಮಹಿಳೆ ಆ ನಂತರ ಮಹಿಳೆಯಿಂದ ಹಣ ಪಡೆದು ಮೋಜು ಮಸ್ತಿ ಮಾಡಿದ್ದ ಆಸಾಮಿ ನಂತರ ಹಣಕೊಟ್ಟ ಬಳಿಕ ಚಾಲಕನ ಅಸಲಿಯತ್ತು ಬೆಳಕಿಗೆ ಬಂದಿದ್ದು ಇಷ್ಟು ದಿನ ಪೋನ್ ನಲ್ಲಿ ಮಾತನಾಡಿದ್ದು, ಬಾಲ್ಯ ಸ್ನೇಹಿತ ಅಲ್ಲ ಅನ್ನೋದು ಗೊತ್ತಾಗುತ್ತಿದ್ದಂತೆ ಕ್ಯಾಬ್ ಚಾಲಕನಿಂದ ಬ್ಲಾಕ್ ಮೇಲ್ ಕಾಟ ಕೂಡ ಶುರುವಾಯಿತು.
ನಿನ್ನ ಮತ್ತು ನಿನ್ನ ಸ್ನೇಹಿತನ ವಿಚಾರ ಹೊರ ಬಿಡ್ತೀನಿ ಹಾಗೆ ನಿನ್ನ ಗಂಡನಿಗೆ ವಿಚಾರ ತಿಳಿಸಿ ಸಂಸಾರ ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿ ತನ್ನ ಬಳಿಯಿರುವ ಚಿನ್ನಾಭರಣ ನೀಡುವಂತೆ ಬೇಡಿಕೆಯೊಡ್ಡಿದ್ದ ಕ್ಯಾಬ್ ಚಾಲಕ ಹಾಗಾಗಿ ಮಹಿಳೆ ಹೆದರಿ ಸುಮಾರು 750 ಗ್ರಾಂ ಚಿನ್ನಾಭರಣವನ್ನು ಕ್ಯಾಬ್ ಚಾಲಕನಿಗೆ ಕೊಟ್ಟಿದ್ದಳು.
ಇದರಿಂದ ಮನನೊಂದ ಮಹಿಳೆ ಬಳಿಕ ಈ ಬಗ್ಗೆ ರಾಮಮೂರ್ತಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದ ಉಬರ್ ಕ್ಯಾಬ್ ಚಾಲಕ ಕಿರಣ್ ಕುಮಾರ್ ವಿರುದ್ದ ದೂರು ನೀಡಿದ್ದರು ಆ ನಂತರ ಹೆಸರಘಟ್ಟ ಮೂಲದ ಕ್ಯಾಬ್ ಚಾಲಕನನ್ನ ಬಂಧಿಸಿ ಸರಿಯಾದ ಡ್ರಿಲ್ ಮಾಡಿದ್ದಾರೆ.
ಬೇರೆ ಬೇರೆ ಕಡೆ ಆಡಮಾನ ಇಟ್ಟು ಹಣ, ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಸೂಲಿ ಮಾಡಿದ ಪೊಲೀಸರು.
ಹಾಗಾಗಿ ಕ್ಯಾಬ್ ನಲ್ಲಿ ಪರ್ಸನಲ್ ವಿಚಾರ ಮಾತಾಡೋ ಮುನ್ನ ಸ್ವಲ್ಪ ಹುಷಾರಾಗಿರಬೇಕು ಇಲ್ಲಂದ್ರೆ ನಿಮ್ಮ ವೈಯಕ್ತಿಕ ಮಾತುಕತೆ, ನಿಮ್ಮ ಜೀವನವನ್ನ ಬೀದಿಗೆ ತರೋದು ಗ್ಯಾರೆಂಟಿ.