ಬೆಂಗಳೂರು : ವರದಕ್ಷಿಣೆ ಕಿರುಕುಳಕ್ಕೆ ಬಿ ಇ ಪದವೀಧರೆಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇವತ್ತು ಬೆಳಗ್ಗೆಯಷ್ಟೇ ಪೋನ್ ಕಾಲ್ ಮಾಡಿ ಅಮ್ಮನೊಂದಿಗೆ ಮಾತನಾಡಿದ್ದ ಮಗಳು ಕೆಲವೇ ಗಂಟೆಗಳಲ್ಲಿ ಇನ್ನಿಲ್ಲವೆಂಬ ಸುದ್ದಿ ಹೆತ್ತಕರುಳುಗಳಿಂದ ಕಣ್ಣೀರು ಕಣ್ಣೀರಿಟ್ಟಿದೆ. 24 ವರ್ಷದ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು,
ಮೂಲತಃ ಹೊಸೂರಿನವರಾದ ಐಶ್ವರ್ಯಳನ್ನು 2020 ರಲ್ಲಿ ಕಬ್ಬನ್ ಪೇಟೆಯ ರಾಜೇಂದ್ರನ್ ಮತ್ತು ರತ್ನಾ ದಂಪತಿ ಪುತ್ರ ಮಂಜುನಾಥ್ ಗೆ ಮದುವೆ ಮಾಡಿದ್ದರು.
ಆದ್ರೆ ಆಗಾಗ ವರದಕ್ಷಿಣೆ ಕಿರುಕುಳ ನೀಡ್ತಿದ್ದ ಪತಿ ಕುಟುಂಬಕ್ಕೆ ಮದುವೆ ವೇಳೆ 240.ಗ್ರಾಂ ಚಿನ್ನಾಭರಣ ಮತ್ತು 2 ಲಕ್ಷ ವರದಕ್ಷಿಣೆ ನೀಡಿದ್ದ ಐಶ್ವರ್ಯ ಪೋಷಕರು, ಕಳೆದ ಎಂಟು ತಿಂಗಳ ಹಿಂದೆ ಮತ್ತಷ್ಟು ವರದಕ್ಷಿಣೆ ಬೇಕೆಂದು ಹಿಂಸೆ ನೀಡಿದಾಗ, ಸ್ವತಃ ಐಶ್ವರ್ಯಳ ತಾಯಿ ಕುತ್ತಿಗೆಯಲ್ಲಿ ಚಿನ್ನದಸರ ಬಿಚ್ಚುಕೊಟ್ಟು, 5 ಲಕ್ಷ ಹಣ ನೀಡಿ, ಮಗಳನ್ನ ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ ಹೋಗಿದ್ದರಂತೆ. ಆದ್ರೆ ಧನದಾಹಿ ಕುಟುಂಬದ ವರದಕ್ಷಿಣೆ ಕಿರುಕುಳಕ್ಕೆ, ಕಬ್ಬನ್ ಪೇಟೆಯ ಪತಿ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು, ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮುದ್ದಾದ ಒಂದೂವರೆ ವರ್ಷದ ಕಂದಮ್ಮನ ಅಗಲಿ 24 ವರ್ಷದ ವಿವಾಹಿತೆ ತನ್ನ ಪತಿ ಕುಟುಂಬದ ವರದಕ್ಷಿಣೆ ಕಿರುಕುಳಕ್ಕೆ ಆತ್ಮಹತ್ಯೆಗೀಡಾಗಿದ್ದಾಳೆ. ಪತಿ ಮಂಜುನಾಥ್, ಮಾವ ರಾಜೇಂದ್ರನ್ ಮತ್ತು ಅತ್ತೆ ರತ್ನಾ ಹಾಗೂ ನಾದಿನಿ ಸುಧಾ ವಿರುದ್ದ ವರದಕ್ಷಿಣೆ ಕಿರುಕುಳದ ಹಿನ್ನಲೆ ಮಗಳು ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆ ಪೋಷಕರು ದೂರು ನೀಡಿದ್ದು, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇತ್ತ ಅತ್ತೆ, ಮಾವ,ಗಂಡನನ್ನ ವಶಕ್ಕೆ ಪಡೆದಿದ್ದಾರೆ
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್.