ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಾಮಗಾರಿ ಹಿನ್ನಲೆಯಲ್ಲಿ ಇಂದು ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ನಗರದ ಕೆಲವೆಡೆ ಪವರ್ ಕಟ್ ಆಗಲಿದ್ದು, ಸಂಜೆ 4 ಗಂಟೆಯ ನಂತ್ರ ವಿದ್ಯುತ್ ಸರಬರಾಜಿನಲ್ಲಿ ಎಂದಿನಂತೆ ಇರಲಿದೆ. ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯವಾಗುವುದಕ್ಕೆ ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಲಾಗಿದೆ.
ಈ ಭಾಗಗಳಲ್ಲಿ ವಿದ್ಯುತ್ ಸ್ಥಗಿತ :
ನಗರದ ಲೀಲಾ ವೆಂಚರ್, ರುಸ್ತಂ ಬಾಗ್ ಲೇಔಟ್, ಕೋಡಿಹಳ್ಳಿ, ಮಣಿಪಾಲ್ ಆಸ್ಪತ್ರೆ, ಗೋಲ್ಡನ್ ಟವರ್, ಜೇಮ್ಸ್ ರೆಸಿಡೆನ್ಸಿ, ಗೋಲ್ಡನ್ ಎನ್‌ಕ್ಲೇವ್, ಟೈಟಾನ್ ಕವೆನ್ಸಾಸ್, ವಿಪ್ರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ.