ಬೆಂಗಳೂರು : ಪಿಜಿ ರೆಂಟ್ ಅಥವಾ ಹಾಸ್ಟೆಲ್ ಶುಲ್ಕಗಳಿಗೆ ಶೇ.12ರಷ್ಟು ಜಿಎಸ್‌ಟಿ (GST) ಅನ್ವಯವಾಗಲಿದೆ ಎಂದು ಬೆಂಗಳೂರಿನ ಜಿಎಸ್‌ಟಿ ಅಡ್ವಾನ್ಸ್ ರೂಲಿಂಗ್ (ಎಎಆರ್) ಪೀಠ ಮಹತ್ವದ ಆದೇಶ ಹೊರಡಿಸಲಾಗಿದೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ತರಕಾರಿ, ಹಾಲು, ದಿನಸಿ ಬೆಲೆ ದುಬಾರಿಯಾಗಿದ್ದ ಬೆನ್ನಲ್ಲೆ ಇದೀಗ ಪಿಜಿ ನಿವಾಸಿಗಳಿಗೆ 12% ಜಿಎಸ್‌ಟಿ ಬರೆ ಬೀಳುವಂತಾಗಿದೆ. ಇದೀಗ ದಿಢೀರ್ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಇನ್ಮುಂದೆ ಪಿಜಿ ದರ ಹೆಚ್ಚಾಗುವ ಸಾಧ್ಯತೆಯಿದ್ದು, ರಾಜ್ಯಕ್ಕೆ ಮೂಲೆ ಮೂಲೆಗಳಿಂದ ಅಷ್ಟೇ ಅಲ್ಲದೇ ಬೇರೆ ರಾಜ್ಯಗಳಿಂದ ಬಂದವರು ಚಿಕ್ಕ ಉದ್ಯೋಗ ಮಾಡಿಕೊಂಡೋ ಅಥವಾ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿ ಪಿಜಿನಲ್ಲಿ ತಂಗಿದ ಜನರಿಗೆ ಬಿಸಿ ತಟ್ಟುವುದಂತೂ ಗ್ಯಾರಂಟಿಯಾಗಿದೆ.