ಬೆಂಗಳೂರು : ಹಾಡಹಗಲೇ ಲಾಂಗ್ ತೋರಿಸಿ ಬೈಕ್ ಸವಾರರಿಂದ ರಾಬರಿ ಮಾಡುತ್ತಿರುವ ಘಟನೆ ಜೆ.ಸಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿಲಿಯಮ್ಸ್ ಟೌನ್‌ನಲ್ಲಿ ನಡೆದಿದೆ.
ಹಗಲಿನಲ್ಲೇ ರಾಬರಿ ಮಾಡಿದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಸ್ಥಳೀಯರು ಟ್ವೀಟ್ ಮಾಡಿ, ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದಾರೆ. ಆದರೆ ಯಾವುದೇ ಠಾಣೆಗೆ ಇದುವರೆಗೆ ದೂರು ಬಂದಿಲ್ಲ ಎಂದು ವರದಿಯಾಗಿದೆ.