ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC president Mallikarjun Kharge) ಮೈಬಣ್ಣ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ (MLC N. Ravikumar)ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ವಿಧಾನ ಪರಿಷತ್ ಎನ್. ರವಿಕುಮಾರ್ ಮಾತನಾಡಿ, ಆರಗ ಜ್ಞಾನೇಂದ್ರ ಅವರು ಮಾತನಾಡುವ ಬರದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಖಂಡ್ರೆ ಬಗ್ಗೆ ಮಾತಾಡ್ತಾ ಬಣ್ಣದ ಬಗ್ಗೆ ಮಾತಾಡಿದ್ದಾರೆ. ಬಿಜೆಪಿ ಬಣ್ಣ ನೋಡಿ ಮಾತಾಡುದಿಲ್ಲ. ವ್ಯಕ್ತಿಯ ಗುಣ ನೋಡಿ ಮಾತಾಡುತ್ತದೆ. ಬಣ್ಣದ ಬಗ್ಗೆ ಮಾತಾಡಿದಕ್ಕೆ ಬೇಜಾರಿದ್ರೆ ಪಕ್ಷದ ವತಿಯಿಂದ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.