ಉಡುಪಿ : ಹಿಂದೂ ಮಹಿಳೆಯ ಖಾಸಗಿ ವಿಡಿಯೋ ಪ್ರಕರಣ ಖಂಡಿಸಿ ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿ ಮಹಿಳಾ ಮೋರ್ಚಾ(BJP Mahila Morcha protests) ವತಿಯಿಂದ ತಲೆಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಯಲಿದೆ.
ಉಡುಪಿಯಲ್ಲಿ ಹಿಂದೂ ಮಹಿಳೆಯ ಖಾಸಗಿ ವಿಡಿಯೋ ಮಾಡಿದ ಆರೋಪಿಗಳಾದ ಮೂವರು ಮಹಿಳೆಯರಿಗೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ. ಪ್ರತಿಭಟನೆಯಲ್ಲಿ ಮಾಜಿ ಸಚಿವ ಅಶ್ವಥ್ ನಾರಾಯಣ, ಎಂ.ಎಲ್.ಸಿ ತೇಜಶ್ವಿನಿ ಗೌಡ, ಎಂಎಲ್‌ಸಿ ರವಿಕುಮಾರ್, ಮಹಿಳಾ ಮೋರ್ಚಾ ನಾಯಕರು ಭಾಗಿಯಾಗಿ ಆಕ್ರೋಶ ವ್ಯಕ್ತಪಡಿಸಲಿದ್ದಾರೆ