ಉಡುಪಿ : ಉಡುಪಿಯ ನೇತ್ರ ಕಾಲೇಜು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರ ಪ್ರಕರಣವನ್ನು ಕೂಡಲೇ ತನಿಖೆ ನಡೆಸಿ, ಮೂವರು ಆರೋಪಿತ ವಿದ್ಯಾರ್ಥಿನಿಯರನ್ನು ಬಂಧಿಸಬೇಕು ಬಿಜೆಪಿ ಎಂಎಲ್‌ಸಿ ರವಿಕುಮಾರ್ (Bjp MLC Ravikumar) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದೊಂದಿಗೆ ರವಿಕುಮಾರ್ ಮಾತನಾಡಿ,ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರು ನಮ್ಮ ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಹೋದಾಗ ವೀಡಿಯೋ ಚಿತ್ರೀಕರಿಸಿ ಅದನ್ನು ಬೇರೆಯವರಿಗೆ ಕಳಿಸಿದ್ದಾರೆ, ಆದರೆ ಈ ಘಟನೆ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ, ತಮಾಷೆಗೆ ವೀಡಿಯೋ ಮಾಡಿದ್ದು ಎಂದು ವಿದ್ಯಾರ್ಥಿನಿಯರೇ ಒಪ್ಪಿಕೊಂಡಿದ್ದಾರೆ.
ಆದರೆ ಸರ್ಕಾರ ವಿದ್ಯಾರ್ಥಿಗಳು ವೀಡಿಯೋ ಮಾಡಿಲ್ಲ ಎನ್ನುತ್ತಿದೆ. ಸಿದ್ದರಾಮಯ್ಯ ಮತ್ತೊಮ್ಮೆ ತಮ್ಮನ್ನು ಸುಳ್ಳು ರಾಮಯ್ಯ ಎಂದು ಸಾಬೀತುಪಡಿಸಿಕೊಂಡಿದ್ದಾರೆ. ಇದು ತಮಾಷೆಯ ವಿಷಯವಲ್ಲ, ಈ ಸರ್ಕಾರಕ್ಕೆ ನಾಚಿಕೆಯಾಗಬೇಕು, ಇದನ್ನು ತನಿಖೆಗೆ ಒಳಪಡಿಸಿ, ಯಾರಿಗೆ ಕಳಿಸಲಾಗಿದೆ ಎಂದು ಪತ್ತೆ ಹಚ್ಚಿ, ತನಿಖೆ ನಡೆಸದೆ ಪ್ರಕರಣ ಮುಚ್ಚಿಹಾಕುವ ಯತ್ನಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಸಿಐಡಿ ತನಿಖೆಗೆ ವಹಿಸಿ, ಮೊಬೈಲ್ ಜಪ್ತಿ ಮಾಡಿ ತನಿಖೆ ನಡೆಸಿ, ಯಾರಿಗೆ ವೀಡಿಯೋ ಕಳಿಸಲಾಗಿದೆ ಎಂದು ಪತ್ತೆ ಮಾಡಿ ಎಂದಿದ್ದಾರೆ.
ತನಿಖೆಯಲ್ಲಿ ಎಲ್ಲಾ ಗೊತ್ತಾಗಲಿದೆ.ಒಂದು ವೇಳೆ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ವೀಡಿಯೋ ಹಿಂದೂ ವಿದ್ಯಾರ್ಥಿನಿಯರು ಮಾಡಿದ್ದರೆ ರಾಜ್ಯದಲ್ಲಿ ಏನಾಗಿರುತ್ತಿತ್ತು, ಶಾಸಕರು ಸುಮ್ಮನೆ ಕೂರುತ್ತಿದ್ರಾ ?ಎಂದು ಪ್ರಶ್ನಿಸಿದ್ದಾರೆ. ಇದರಲ್ಲಿ ಜಾತಿ, ರಾಜಕಾರಣ ಮಾಡಲ್ಲ, ಅಂತಹ ಕೆಟ್ಟ ರಾಜಕೀಯ ಬಿಜೆಪಿಗೆ ಬೇಕಿಲ್ಲ, ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಕೂಡಲೇ ಮೂವರು ವಿದ್ಯಾರ್ಥಿನಿಯರನ್ನು ಬಂಧಿಸಬೇಕು. ತನಿಖೆ ನಡೆಸಬೇಕು, ಸಿಬಿಐಗೆ ವಹಿಸಬೇಕು, ಮೂವರು ಆರೋಪಿತ ವಿದ್ಯಾರ್ಥಿನಿಯರ ಬಂಧಿಸಬೇಕು ಎಂದ ರವಿಕುಮಾರ್ ಕಿಡಿಕಾರಿದ್ದಾರೆ