ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿಹೊಸೂರು, ಭದ್ರಯ್ಯನಹಳ್ಳಿ ಗ್ರಾಮಗಳಲ್ಲಿ ಮಕ್ಕಳಲ್ಲಿ ವಿಚಿತ್ರ ರೋಗವೊಂದು ಕಾಣಿಸಿಕೊಂಡಿದ್ದು, ಪೋಷಕರಿಗೆ ಹೊಸ ಆತಂಕ ಶುರುವಾಗಿದೆ.
ಹವಮಾನ ಬದಲಾವಣೆಯಾದಂತೆ ಒಂದಲ್ಲ ಒಂದು ರೋಗಗಳು ಮಕ್ಕಳನ್ನು ಆವರಿಸಿಕೊಳ್ಳುತ್ತಿದೆ. ಈ ನಡುವೆ ಇದೀಗ ಹೊಸ ರೋಗ ಕಾಟ ಹೆಚ್ಚಾಗಿದ್ದು, ಚಾಮರಾಜನಗರದ ಹನೂರು ಗ್ರಾಮದ ನಾಲ್ವರು ಮಕ್ಕಳಲ್ಲಿ ಈ ವಿಚಿತ್ರ ಕಪ್ಪು ಬಿಳಿ ಚುಕ್ಕೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ವಿಚಿತ್ರ ಚರ್ಮರೋಗ ಲಕ್ಷಣಗಳೇನು ?
ಈ ವಿಚಿತ್ರಚರ್ಮ ರೋಗವೂ ಮಗುವು 6 ತಿಂಗಳು ಇರುವಾಗಲೇ ಕಾಣಿಸಿಕೊಳ್ಳುತ್ತಿದ್ದು, ಇದು ಕೈ ಕಾಲು, ಮುಖದ ಮೇಲೆ ಕಪ್ಪು ಬಿಳಿ ಚುಕ್ಕೆ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಈ ರೋಗವೂ ಕಾಲಕ್ರಮೇಣ ಮಕ್ಕಳಲ್ಲಿ ದೃಷ್ಟಿದೋಷ ಹಾಗೂ ಶ್ರವಣದೋಷ ಸಮಸ್ಯೆ ಕಾಣಿಸುತ್ತದೆ. ಮಕ್ಕಳಿಗೆ ಒಂಬತ್ತು ವರ್ಷ ತುಂಬಿದ ನಂತರ ಚರ್ಮದಲ್ಲಿ ಹುಣ್ಣು, ಬಿಳಿ ಮಚ್ಚೆ, ಚರ್ಮ ಕಪ್ಪು ಬಣ್ಣಕ್ಕೆ ತಿರುಗುವುದು, ಕಣ್ಣು ಊದಿಕೊಳ್ಳುವಿಕೆ ಈ ರೀತಿ ನಾನಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ರೋಗವನ್ನು ಚುಕ್ಕೆ ರೋಗ ಎಂದು ಕರೆಯಲಾಗುತ್ತಿದೆ.