ಬೆಂಗಳೂರು : ಬಿಜೆಪಿ ಅವರು ಹೇಳೋದನ್ನೆಲ್ಲ ನಾವು ಕೇಳಿಕೊಂಡು ಕೂರೋಕೆ ಆಗುತ್ತಾ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.ಶಾಸಕ ತನ್ವಿರ್ ಶೇಠ್ ಬರೆದ ಪತ್ರದ ಕುರಿತು ಬಿಜೆಪಿ ನಾಯಕರ ಆರೋಪ ವಿಚಾರವಾಗಿ ಸದಾಶಿವನಗರದಲ್ಲಿ ಮಾತನಾಡಿದ ಅವರು ಡಿಜೆ ಹಳ್ಳಿ, ಕೆಜೆ ಹಳ್ಳಿ ಕೇಸ್ ವಾಪಸ್ಸು ತೆಗೆದುಕೊಂಡಿದ್ದೇವೆ ಅಂತಾ ಯಾರು ಹೇಳಿದ್ದೂ ರೀ..? ಎಂದು ಬಿಜೆಪಿ ನಾಯಕರ ಆರೋಪಕ್ಕೆ ಗರಂ ಆದರು.
ಕೇಸ್ ವಾಪಸ್ಸು ಪಡೀಯಬಾರದು ಅಂತಾ ಬಿಜೆಪಿಯವರು ಹೇಳಬಹುದು.ಆದರೆ ಬಿಜೆಪಿ ಯವರು ಹೇಳೋದನ್ನೆಲ್ಲ ನಾವು ಕೇಳಿಕೊಂಡು ಕೂರೋಕೆ ಆಗುತ್ತಾ..?.ಸರ್ಕಾರದಲ್ಲಿ ನಮ್ದೇ ಆದಂತಹ ಒಂದು ಪ್ರೊಸೀಸರ್ ಇದೆ.ನಾನು ಹಿಂದೆ ಕಾಂಗ್ರೆಸ್ ನಲ್ಲಿ ಕಮಿಟಿ ಅಧ್ಯಕ್ಷ ಆಗಿದ್ದೆ.ಅವಾಗ ನಾನು ಹೋಗಿದಂತಹ ಸಂದರ್ಭದಲ್ಲಿ ಅಮಾಯಕರ ತಾಯಿ ತಂದೆಯರು,ಮನವಿ ಮಾಡಿದ್ರು.
ಗಲಾಟೆ ನಡೆದಾಗ ನಿಂತುಕೊಂಡು ನೋಡ್ತಾ ಇದ್ದವರನ್ನು ಪೊಲೀಸರು ಎಳೆದುಕೊಂಡು ಹೋದ್ರು ಅಂತಾ ಕೇಳಿಕೊಂಡ್ರು.ಆ ಸಂದರ್ಭದಲ್ಲಿ ನಮ್ಮ ಸರ್ಕಾರ ಏನು ಇರಲಿಲ್ಲ. ಇವತ್ತು ನಮ್ಮ ಶಾಸಕರು ಪರಿಶೀಲನೆ ಮಾಡಿ ಅಂತಾ ಹೇಳಿದ್ದಾರೆ.ಅದನ್ನು ನಾವು ಪರಿಶೀಲನೆ ಯನ್ನು ಮಾಡಬಾರದಾ ಎಂದು ಹೇಳಿದರು.ಇನ್ನೂ ಮರು ತನಿಖೆ ಮಾಡುವ ಬಗ್ಗೆ ಶಾಸಕ ತನ್ವೀರ್ ಸೇಠ್ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ ಅವ್ರು ಏನು ಬೇಕಾದರೂ ಹೇಳಬಹುದು, ಅದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.
ವರದಿ : ಬಸವರಾಜ ಹೂಗಾರ