ಬೆಂಗಳೂರು : ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್‌ನಲ್ಲಿ ಚರ್ಚೆ ಮಾಡಿದ ವಿಚಾರವನ್ನು ನಿಮ್ಮ ಮುಂದೆ ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ ಅವರು ನಾವು ಊಟಕ್ಕೆ ಸೇರಿದ್ದೆವು ಅಷ್ಟೆ, ಬೇರೇನೂ ಇಲ್ಲ. ನೀವೇ ರಹಸ್ಯ ಸಭೆ ಅಂತ ಹಾಕ್ತಾ ಇದ್ದೀರಲ್ಲಾ. ಚರ್ಚೆ ಮಾಡಿದ ವಿಚಾರ ನಿಮ್ಮ ಮುಂದೆ ಹೇಳಲು ಸಾಧ್ಯವಿಲ್ಲ. ರಾಜಕೀಯದವರು ರಾಜಕೀಯನೇ ಮಾತಾಡೋದು. ಚುನಾವಣೆಗೂ ಮುನ್ನ ಎಸ್ ಸಿ ಎಸ್ ಟಿ ಕಾನ್ಫರೆನ್ಸ್ ಮಾಡಿದ್ದೆವು.ಅಲ್ಲಿ ನಾವು ೧೦ ರೆಸ್ಯುಲೇಷನ್ ಮಾಡಿದ್ದೆವು. ಸರ್ಕಾರ ಬಂದಾಗ ಅದನ್ನು ಬಗೆಹರಿಸುತ್ತೇವೆ ಅಂತ,ಆ ವಿಚಾರ ಚರ್ಚೆ ಮಾಡಿದ್ದೆವು ಅಷ್ಟೆ ಎಂದರು.
ಇಂದೂ ಕೂಡ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ ನಾನು ಪದೇ ಪದೇ ಹೇಳ್ತಾ ಇದ್ದೀನಿ. ಸಿಎಂ ಹಾಗೂ ನಾನೂ ಕೂಡ ಪದೇ ಪದೇ ಹೇಳ್ತಾ ಇದ್ದೀವಿ. ನಾವು ರಾಜಕೀಯವಾಗಿ ಇದನ್ನ ಉಪಯೋಗಿಸುತ್ತಿಲ್ಲ ಅದರ ಅಗತ್ಯ ಇಲ್ಲ. ಕೋರ್ಟ್ ಸಮನ್ಸ್ ಹೋಗಿದೆ ಹಾಗಾಗಿ ಕ್ರಮ ತೆಗೆದುಕೊಂಡಿದ್ದಾರೆ. ಕಾನೂನು ಬಿಟ್ಟು ಏನಾದ್ರೂ ಮಾಡಿದ್ರೆ ಮಾತನಾಡಬೆಕಿತ್ತು. ಇವರು ರಾಜಕೀಯಕ್ಕಾಗಿ ಬಳಸ್ತಾ ಇದ್ದಾರೆ ಎಂದರು.
ಬಾಬ ಬುಡನ್ ಗಿರಿ ಕೇಸ್ ರೀ ಓಪನ್ ವಿಚಾರವಾಗಿ ಪ್ರತಿಕ್ರಿಯಿಸಿ ನಾವ್ಯಾಕೆ ರೀ ಓಪನ್ ಮಾಡೋಣ.
ಪೊಲೀಸ್ ಅಧಿಕಾರಿ ಕ್ರಮ ತೆಗೆದುಕೊಂಡ್ರೆ ತಪ್ಪಾ. ಕೋರ್ಟ್ ಸೂಚನೆ ಮೇರೆಗೆ ತನಿಖೆ ಕೈಗೊಂಡಿದ್ದಾರೆ.
ಕೋರ್ಟ್ ಗೂ ಬೆಲೆ ಇಲ್ಲ ಕಾನೂನಿಗೂ ಬೆಲೆ ಇಲ್ಲ. ಯಾರೋ ಒಂಬತ್ತು ಕೇಸ್ ಇರುವವರನ್ನ ರಕ್ಷಣೆ ಮಾಡಲು ಇವರು ಹೊರಟಿದ್ದಾರೆ. ಅವನಿಗೆ ಇಷ್ಟೊಂದು ರಕ್ಷಣೆ ಯಾಕೆ. ಬೇರೆ ಹಿಂದುಗಳು ಇಲ್ವಾ ಹಾಗಾದ್ರೆ. ನಮಗೆ ಮತ ಹಾಕಿರುವ ಪೈಕಿ ಹೆಚ್ಚಿನವರು ಹಿಂದುಗಳೆ ಅಲ್ವಾ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ವರದಿ : ಬಸವರಾಜ ಹೂಗಾರ