ಬೆಂಗಳೂರು :ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(Cm Siddaramaiah) ಸರ್ಕಾರಿ ನಿವಾಸದಲ್ಲಿ ಆಂಗ್ಲೋ ಇಂಡಿಯನ್ ನಿಯೋಗ ಭೇಟಿ ಆಗಸ್ಟ್ 2 ರಂದು ಆಂಗ್ಲೋ ಇಂಡಿಯನ್ ದಿನ ಶುಭಾಶಯ ಕೋರಲಾಯಿತು.
ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಮಾಜಿ ಶಾಸಕಿ ವಿನಿಶಾ ನಿರೋ ಮಾತನಾಡಿ, ಆಗಸ್ಟ್ 2 ರಂದು ಆಂಗ್ಲೋ ಇಂಡಿಯನ್ ದಿನ, ಇದಕ್ಕಾಗಿ ನಾವು ಸಿಎಂ ಭೇಟಿಯಾಗಿ ಶುಭಾಶಯ ಕೋರಿದ್ದೇವೆ. ಸಿಎಂ ಕೂಡ ನಮಗೆ ಶುಭಾಶಯ ಕೋರಿದ್ರು, ಆಂಗ್ಲೋ ಇಂಡಿಯನ್ ಅಭಿವೃದ್ಧಿ ಗಾಗಿ ಎರಡು ಕೋಟಿ ಕೋಡೋದಾಗಿ ಭರವಸೆ ನೀಡಿದ್ದಾರೆ. ಬಳಿಕ ಏರ್ ಪೋರ್ಟ್ ಕಡೆ ಸಿಎಂ ಸಿದ್ದರಾಮಯ್ಯ ಹೊರಟಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ ಕರ್ನಾಟಕ ನಾಯಕರ ಸಭೆ ಕರೆದಿರುವ ಹಿನ್ನಲೆ ಕೆಂಪೇಗೌಡ ಏರ್‌ಪೋರ್ಟ್ ಮೂಲಕ ದೆಹಲಿಗೆ ಪ್ರಯಾಣಿಸಲಿದ್ದಾರೆ.