ಬೆಂಗಳೂರು: ಎಲ್ಲೋ ಮಳೆಯಾಗುತ್ತಿದೆ ಇಂದು. ಕಲರ್ ಕಲರ್ ಛತ್ರಿಯೂ ಮಾರ್ಕೆಟ್ ನಲ್ಲಿ ಬಂದಿದೆ ಇಂದು. ಯೆಸ್ ಮಾನ್ಸೂನ್ ಶುರುವಾಗಿದೆ. ಬಣ್ಣ ಬಣ್ಣದ, ಪ್ಲೇನ್, ವಿವಿಧ ಬ್ರಾಂಡ್‌ಗಳ ಛತ್ರಿಗಳು ಎಲ್ಲರನ್ನು ಆಕರ್ಷಿಸುತ್ತಿವೆ. ಸ್ಟ್ರೀಟ್ ಗಳಲ್ಲಿ ಮಾರುತ್ತಿರುವ ಒಂದು ಛತ್ರಿಗೆ 200 ರೂ. ಯಿಂದ 450 ರೂ ರೇಟ್ ಇದೆ.
ಸಿಲಿಕಾನ್ ಸಿಟಿಯ ಕಾಮರ್ಷಿಯಲ್ ಸ್ಟ್ರೀಟ್, ಮಲ್ಲೇಶ್ವರಂ, ಮೆಜೆಸ್ಟಿಕ್ ಸೇರಿದಂತೆ ಇನ್ನು ಕೆಲವು ಕಡೆ ಸಿಗ್ನಲ್ ಗಳಲ್ಲಿ ಛತ್ರಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಕಲರ್ ಕಲರ್ ಬ್ರ್ಯಾಂಡ್ ಗಳ ಛತ್ರಿಗಳನ್ನು ಕೊಳ್ಳಲು ಜನ ಮುಗಿಬಿಳುತ್ತಿದ್ದಾರೆ.
ಇನ್ನು ಲೇಡಿಸ್ ತಮ್ಮ ವೆನಿಟಿ ಬ್ಯಾಗ್ ನಲ್ಲಿ ಕ್ಯಾರಿ ಮಾಡೋಕೆ ಸ್ಮಾಲ್ ಛತ್ರಿಗಳನ್ನೇ ಖರೀದಿಸೋಕೆ ಇಷ್ಟ ಪಡ್ತಾರೆ. ಸಣ್ಣ ಛತ್ರಿಗೆ 200 ರೂ. ಇದ್ರೆ, ಮೀಡಿಯಂ ಗಾತ್ರದ ಛತ್ರಿಗೆ 300 ರೂ ಇದೆ. ದೊಡ್ಡ ಗಾತ್ರದ ಛತ್ರಿಗೆ 350 ರಿಂದ 500 ರವರೆಗೆ ಸಿಗುತ್ತೆ. ಇನ್ನು ಅಂಗಡಿಗಳಲ್ಲಿ ಬಹುತೇಕ ವಿವಿಧ ಬ್ರಾಂಡ್‌ಗಳ ಛತ್ರಿಗಳನ್ನು ಸಿಗುತ್ತವೆ.
![](https://rajnewskannada.in/wp-content/uploads/2023/07/image-682-768x1024.png)
ಸ್ಟ್ರೀಟ್ ಸೈಡ್ ಛತ್ರಿ
ಅಂಗಡಿಗಳಲ್ಲಿ, ಮಾರುಕಟ್ಟೆಗಳಲ್ಲಿ, ರಸ್ತೆ ಬದಿ ಬೀದಿ ವ್ಯಾಪಾರಿಗಳಲ್ಲಿ ಛತ್ರಿ, ರೇನ್‌ಕೋಟ್ ಮಾರಾಟದ ಬಲು ಜೋರಾಗಿದೆ. ಸ್ಕೂಲ್ ಗೆ ಹೋಗುವ ಮಕ್ಕಳಿಗೆ ಛತ್ರಿ, ರೆನ್ ಕೋಟ್ ಖರೀದಿಸಲು ಪೋಷಕರು ಅಂಗಡಿಗಳತ್ತ ಮುಖಮಾಡಿದ್ದಾರೆ. ಬೀದಿ ಬದಿಯಲ್ಲಿ ಮಾರುತ್ತಿರುವ ಒಂದು ಛತ್ರಿಗೆ 200 ರಿಂದ 450ರವರೆಗೆ ದರ ಇದೆ. ಸಣ್ಣ ಛತ್ರಿಗೆ 200 ಇದ್ದು, ಮಧ್ಯಮ ಗಾತ್ರದ ಛತ್ರಿಗೆ 300 ದರ ಇದೆ. ದೊಡ್ಡ ಗಾತ್ರದ ಛತ್ರಿಗೆ 350 ರಿಂದ 450 ರವರೆಗೆ ದರ ಇದೆ.
![](https://rajnewskannada.in/wp-content/uploads/2023/07/image-681-1024x569.png)
ಸೀಸನ್ ನಲ್ಲಿ ಬಲು ತುಟ್ಟಿ
ಅತಿ ಕಡಿಮೆ ಬೆಲೆಯಿಂದ ದುಬಾರಿ ಬೆಲೆಯವರೆಗೂ ಛತ್ರಿ, ರೇನ್‌ಕೋಟ್‌ಗಳು ಮಾರಾಟವಾಗುತ್ತಿವೆ. ಮಕ್ಕಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯರು ತಮಗೆ ಇಷ್ಟವಾದಗಳನ್ನು ಖರೀದಿಸುತ್ತಿದ್ದಾರೆ. 200ರಿಂದ 800ವರೆಗೂ ರೇಟ್ ಇದ್ರೂ, ಅಂಗಡಿಗಳಲ್ಲಿ ವೆರಾಯಿಟಿ ಕಲರ್ ಕಲರ್ ಬ್ರ್ಯಾಂಡ್ ಗಳ ಛತ್ರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಕಡಿಮೆ ಬೆಲೆಯ ಬ್ರ್ಯಾಂಡ್, ದುಬಾರಿ ಬೆಲೆಯ ಬ್ರ್ಯಾಂಡ್ ಛತ್ರಿಗಳು ಲಭ್ಯ. ರಾರಯಬಿಟ್, ಕ್ಯಾಮೆಲ್, ಪಾಪ್ಪಿ ಮುಂತಾದ ಪ್ರಸಿದ್ಧ ಬ್ರಾಂಡ್‌ಗಳ ಛತ್ರಿಗಳು ಸಿಗುತ್ತಿವೆ.
-ಹರ್ಷಿತಾ ಪಾಟೀಲ್