ಬೆಂಗಳೂರು : ಇಂದು ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಆಗಮಿಸಲಿದ್ದಾರೆ. ಮಧ್ಯಾಹ್ನ 2:30 ಕ್ಕೆ ಬೆಂಗಳೂರಿಗೆ ಸುರ್ಜೇವಾಲ ಆಗಮಿಸಲಿದ್ದಾರೆ.
ಜನವರಿ 10 ರಂದು ಕೆಪಿಸಿಸಿ ಕಚೇರಿಯಲ್ಲಿ ಲೋಕಸಭೆ ಸಂಬಂಧ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಡಿಸಿಎಂ ವಿಚಾರವಾಗಿ ಚರ್ಚೆ ಮಾಡುವ ಸಾಧ್ಯತೆಯಿದೆ. ಪದೇ ಪದೇ ಡಿಸಿಎಂ ವಿಚಾರ ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತಿರುವ ಕಾರಣ ಧನಿ ಎತ್ತುವ ಸಾಧ್ಯತೆಯಿದೆ. ಲೋಕಸಭಾ ಚುನಾವಣೆ ತಯಾರಿ ವಿಚಾರವಾಗಿ ಇಂದು ಮತ್ತು ನಾಳೆ ಸಚಿವರು ಹಾಗೂ ಶಾಸಕರ ಭೇಟಿ ಮಾಡಲಿದ್ದಾರೆ. ನಾಳೆ ನಿಗಮ,ಮಂಡಳಿ ವಿಚಾರವಾಗಿ ಸಿಎಂ,ಡಿಸಿಎಂ ಜೊತೆ ಚರ್ಚೆ ಸಾಧ್ಯತೆಯಿದೆ, ನಿಗಮ,ಮಂಡಳಿ ಫೈನಲ್ ಮಾಡಲು ಸುರ್ಜೇವಾಲ ಮೀಟಿಂಗ್ ಮಾಡಲಿದ್ದಾರೆ.