ಬೆಂಗಳೂರು : ನಾಳೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯಲಿದ್ದು, ಈ ನಿಟ್ಟಿನಲ್ಲಿ ದೆಹಲಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ (Deputy CM DK Shivakumar) ತೆರಳಲಿದ್ದಾರೆ.
ಈ ನಿಟ್ಟಿನಲ್ಲಿ ಇಂದು ಮಾಧ್ಯಮದೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಇಂದು ದೆಹಲಿಗೆ ಹೋಗ್ತಿದ್ದೇನೆ. ಪಕ್ಷದ ಕೆಲಸ ಇದೆ, ಸರ್ಕಾರದ ಕೆಲಸ ಇದೆ. ಲೋಕಸಭೆ, ಪಕ್ಷದ ಹಿತದೃಷ್ಟಿಯಿಂದ ಹೋಗ್ತಿದ್ದೇವೆ. ಚುನಾವಣೆ ದೃಷ್ಟಿಯಿಂದಲೇ ಸಭೆ ನಡೆಯುತ್ತಿದೆ. ನಮ್ಮ ಗ್ಯಾರಂಟಿ ಜನರಿಗೆ ತಲುಪುತ್ತಿದೆಯಾ.? ಗ್ಯಾರಂಟಿ ಯೋಜನೆಗಳನ್ನೂ ಚರ್ಚೆ ಮಾಡ್ತೀವಿ ಎಂದಿದ್ದಾರೆ.
ಇನ್ನೂ ಇಂದಿನಿಂದ ನಮ್ಮ ಸರ್ಕಾರ ಜಾರಿಗೆ ತಂದ ಗೃಹಜ್ಯೋತಿನಿನಗೂ ಫ್ರೀ, ನನಗೂ ಫ್ರೀ, ಗೃಹಜ್ಯೋತಿ 2000 ಫ್ರೀ ಕೊಡ್ತೀವಿ. ನಾಳೆ ನಡೆಯುವ ದೆಹಲಿ ಸಭೆಗೆ ಸೀನಿಯರ್ ಲೀಡರ್, ಎಂಎಲ್‌ಎ, ಎಂಪಿಗಳನ್ನೂ ಕರೆದಿದ್ದೇವೆ. ಮೂರು ಹಂತದಲ್ಲಿ ಚರ್ಚೆಯಾಗಲಿದೆ ಎಂದಿದ್ದಾರೆ