ಬೆಂಗಳೂರು : ಇತ್ತೀಚೆಗೆ ಎಲ್ಲವೂ ಕಾಸ್ಟ್ಲಿ ಆಗಿದೆ. ಇಂದಿನಿಂದ ರಾಜ್ಯದಲ್ಲಿ ದುಬಾರಿ ದುನಿಯಾ ಆರಂಭವಾಗಿದೆ. ಒಂದು ಕಡೆ ಉಚಿತ ವಿದ್ಯುತ್ ಜಾರಿಯ ಖುಷಿಯಲ್ಲಿದ್ರೆ, ಮತ್ತೊಂದೆಡೆ ಹಾಲು, ಹೋಟೆಲ್ ತಿಂಡಿ, ತರಕಾರಿ ದುಬಾರಿಯಾಗಿದೆ. ಅಡುಗೆ ಮಾಡೋದು ಬೇಡ, ತರಕಾರಿ ರೇಟ್ ಕೇಳುದ್ರೆ ಸುಡುತ್ತೆ ಕೈ ಎನ್ನುತ್ತಿದ್ದಾರೆ ಸಾರ್ವಜನಿಕರು.
ಟೊಮ್ಯಾಟೋ ಬೆಲೆ ಗಗನ ಕುಸುಮವಾಗಿದೆ. ದಿನನಿತ್ಯ ಬಳಕೆಯ ತರಕಾರಿಗಳಿಗೂ ದರದ ಬರೆ ಎದುರಾಗಿದೆ. ತರಕಾರಿಗಳ ರೇಟ್ ಕೇಳಿ ಗ್ರಾಹಕರ ಜೇಬು ಸುಡುತ್ತಿದೆ. ದರ ಏರಿಕೆ ಬಿಸಿಯಿಂದ ಗ್ರಾಹಕರು ಕಂಗಾಲಾಗಿದ್ದಾರೆ.
ಹೇಗಿದೆ ತರಕಾರಿ ರೇಟ್?
-ಟೊಮ್ಯಾಟೊ-150 ರಿಂದ 160 ರೂಪಾಯಿ
-ಮೆಣಸಿನಕಾಯಿ – ಕಳೆದ ವಾರ 60 ರೂಪಾಯಿ ಈಗ 120 ರೂಪಾಯಿಗೆ ಏರಿಕೆ
-ಶುಂಠಿ – ಕಳೆದ ವಾರ 160 ಈಗ 300 ರೂಪಾಯಿಯಾಗಿದೆ
-ಬೆಳ್ಳುಳ್ಳಿ – ಒಂದು ತಿಂಗಳ ಹಿಂದೆ 80-100 ರೂಪಾಯಿ, ಇಂದು 200 ರೂಪಾಯಿ ತಲುಪಿರುವ ಬೆಳ್ಳುಳ್ಳಿ
-ಹುರುಳಿಕಾಯಿ – 80 – 100 ರೂಪಾಯಿ
-ಕ್ಯಾರೆಟ್- 60 ರೂಪಾಯಿ
-ಬೀಟ್ ರೋಟ್- 30 ರೂಪಾಯಿ
-ಮೂಲಂಗಿ – 20 ರೂಪಾಯಿ
-ಗುಂಡು ಬದನೆಕಾಯಿ- 60 ರೂಪಾಯಿ
-ಕ್ಯಾಪ್ಸಿಕಂ- 60 ರೂಪಾಯಿ
-ಹೀರೇಕಾಯಿ – 80 ರೂಪಾಯಿ
-ಬೆಂಡೆ ಕಾಯಿ- 60 ರೂಪಾಯಿ