ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಸಿಸಿಬಿಯಿಂದ ಬಂಧಿತರಾಗಿರೋ ಶಂಕಿತ ಉಗ್ರರು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು ಇಂದಿಗೆ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ.
ಇಂದು ಐವರು ಶಂಕಿತರನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿರುವ ಸಿಸಿಬಿ ಪೊಲೀಸ್ರು ಮತ್ತಷ್ಟು ವಿಚಾರಣೆ ನಡೆಸುವ ಹಿನ್ನಲೆ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ.
ಈಗಾಗಲೇ ಏಳು ದಿನಗಳ ಕಾಲ ಶಂಕಿತ ಉಗ್ರರ ತೀವ್ರ ವಿಚಾರಣೆ ನಡೆದಿದ್ದು, ವಿಚಾರಣೆ ವೇಳೆ ಹಲವು ಸ್ಪೋಟಕ ವಿಚಾರಗಳನ್ನ ಶಂಕಿತರು ಬಾಯಿ ಬಾಯಿಬಿಟ್ಟಿದ್ದಾರೆ. ಮತ್ತೊಂದು ಕಡೆ ಜುನೈದ್ ಹಾಗೂ ಗ್ರನೇಡ್ ತಂದು ಕೊಟ್ಟ ವ್ಯಕ್ತಿಗಾಗಿಯೂ ಹುಡುಕಾಟ ನಡೆಸಲಾಗ್ತಿದೆ. ಜೊತೆಗೆ ಇನ್ನೂ ಕೆಲವರು ಶಂಕಿತರ ಜೊತೆ ಸಂಪರ್ಕದ ಶಂಕಿಸಲಾಗುತ್ತಿದೆ.
ಹೀಗಾಗಿ ಮತ್ತೆ ಏಳು ದಿನಗಳ ಕಾಲ ಕಸ್ಟಡಿಗೆ ಕೇಳಲು ಸಿಸಿಬಿ ಸಿದ್ದತೆ ನಡೆಸಿದೆ. ಇನ್ನೂ ಪ್ರಕರಣದ A1 ಆರೋಪಿ ಉಗ್ರ ಟಿ ನಜೀರ್ ನನ್ನು ಕಸ್ಟಡಿಗೆ ಪಡೆಯಲು ಸಿಸಿಬಿ ಸಿದ್ದತೆ ನಡೆಸಿದ್ದು, ಜೈಲಲ್ಲಿರುವ ಉಗ್ರ ನಜಿರ್ ನ ವಿಚಾರಣೆ ನಡೆಸಿದ್ರೆ ಮತ್ತಷ್ಟು ಅಂಶಗಳು ಹೊರಬೀಳಲಿವೆ.
A2 ಆರೋಪಿ ಜುನೈದ್ ಗೆ ಉಗ್ರ ಚಟುವಟಿಕೆ ನಡೆಸುವಂತೆ ಬ್ರೈನ್ ವಾಶ್ ಮಾಡಿದ್ದ ನಜಿರ್ 2008ರ ಸರಣಿ ಬಾಂಬ್ ಸ್ಪೋಟದ ಆರೋಪಿಯಾಗಿದ್ದಾನೆ.
ಇನ್ನೂ ಪ್ರಕರಣ ಗಂಭೀರತೆಯನ್ನ ಅರಿತಿರುವ ಸಿಸಿಬಿ ಅಧಿಕಾರಿಗಳು ಈಗಾಗಲೇ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಅಂತರಾಜ್ಯದ ಬಗ್ಗೆ ಕೂಡ ಮಾಹಿತಿ ಕಲೆ ಹಾಕುತ್ತಿದ್ದಾರೆ ಇನ್ನೇಷ್ಟು ಸ್ಪೋಟಕ ವಿಚಾರಗಳು ಹೊರಬರುತ್ತೋ ಕಾದು ನೋಡಬೇಕು..
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್.