ಹಾವೇರಿ : ರಾಣೆಬೆನ್ನೂರು ರೈಲ್ವೆ ಆವರಣದ ಒಳಗಡೆ ಡಿ.ದರ್ಜೆ ನೌಕರರು ವಿವಿಧ ಬೇಡಿಕೆ ಇಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಡಿ ದರ್ಜೆ ನೌಕರರು ಕಳೆದ 4 ದಿನಗಳಿಂದ ಜನವರಿ 11 ವರೆಗೂ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಸಂತೋಷ್ ಯಾದವಾಡ. ಕೆ ಮಂಜುನಾಥ. ಕೆ ಕರಬಸಪ್ಪ. ಬಸವರಾಜ ಲಮಾಣಿ.ಚಂದ್ರು ಲಮಾಣಿ. ಚಂದ್ರಶೇಖರ್ ಚನ್ನೂರು. ಸೋಮಶೇಖರ್.ಗಂಗಪ್ಪ.ಹಾಲಪ್ಪ ಮತ್ತು ಇತರರು ಭಾಗಿಯಾಗಿದ್ರು.
2004ರ ಜನವರಿ 1ರ ನಂತರ ನೇಮಕಾತಿ ಆದ ಎಲ್ಲಾ ರೈಲ್ವೆ ಕಾರ್ಮಿಕರಿಗೆ ಹೊಸ ಪೆನ್ಸನ್ ಪದ್ದತಿಯನ್ನು ರದ್ದು ಮಾಡಿ ಹಳೆ ಪೆನ್ಸನ್ ಪದ್ದತಿಯನ್ನು ಜಾರಿಗೊಳಿಸಬೇಕೆಂದು ಉಪವಾಸ ಸತ್ಯಾಗ್ರಹ ಮೂಲಕ ಆಗ್ರಹಿಸುತ್ತಿದ್ದಾರೆ.