ಬೆಂಗಳೂರು: ಸರ್ಕಾರದ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪ ವಿಚಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಡಿ.ಕೆ ಶಿವಕುಮಾರ್ ಅವರು, ‘ಹೆಚ್ ಡಿ ಕುಮಾರಸ್ವಾಮಿ ಸಮಾಧಾನಕ್ಕೆ ಏನಾದರೂ ಮಾತನಾಡಲಿ, ಪಾಪ ಅವರು ವಿಶ್ರಾಂತಿ ತೆಗೆದುಕೊಂಡು ಬಂದಿದ್ದಾರೆ ಎನ್ನುವ ಮೂಲಕ ಟಾಂಗ್ ನೀಡಿದ್ದಾರೆ.
ಮಾಟ, ಮಂತ್ರ ಕೃತಕ ಶಕ್ತಿನೋ ಏನಾದ್ರೂ ಹೇಳಲಿ ಎಲ್ಲಿ ಶ್ರಮವಿದೆ ಅಲ್ಲಿ ಶಕ್ತಿ,ಭಕ್ತಿ ಇರುತ್ತೆದೆ. ಶ್ರದ್ದೆಯಿಂದ ಕೆಲಸ ಮಾಡಿದಾಗ ಫಲ ಸಿಗುತ್ತದೆ. ಕಳೆದ 3 ವರ್ಷಗಳಿಂದ ಸರಿಯಾಗಿ ನಿದ್ರಿಸಿಲ್ಲ, ನಮ್ಮ ಕಾರ್ಯಕರ್ತರನ್ನ ಸರಿಯಾಗಿ ನಿದ್ದೆಮಾಡಲು ಬಿಟ್ಟಿಲ್ಲ. ರಾಜ್ಯದ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟು ನಂಬಿಕೆ ಇಟ್ಟು ಗೆಲುವು ನೀಡಿದ್ದಾರೆ. ನಮ್ಮ ಶ್ರಮದ ಬಗ್ಗೆ ನಮಗೆ ಗೊತ್ತಿದೆ ಎಂದು ಟಾಂಗ್ ನೀಡಿದರು..