ಬೆಂಗಳೂರು : ಬೆಂಗಳೂರಿನಲ್ಲಿ ಭಾರೀ ಅನಾಹುತ ತಪ್ಪಿದ್ದು, ಸಿಐಡಿ ಕಚೇರಿ ಮುಂದೆ ನೆನ್ನೆ ರಾತ್ರಿ ಎಂಟು ವ್ಹೀಲ್ ನ ಗೂಡ್ಸ್ ಗಾಡಿಯಿಂದ ಡೆಡ್ಲಿ ಆ್ಯಕ್ಸಿಡೆಂಟ್ ಸಂಭವಿಸಿದೆ.
ಫುಟ್ ಪಾತ್ ಮೇಲಿದ್ದ ಪೊಲೀಸ್ ಚೌಕಿಯೇ ಕಿತ್ತೋಗೋವಷ್ಟು ರಭಸದಿಂದ ಗೂಡ್ಸ್ ಗಾಡಿ ಬಂದು ಡಿಕ್ಕಿ ಹೊಡೆದಿದೆ. ಈ ಪರಿಣಾಮದಿಂದ ಸಿಐಡಿ ಆಫೀಸ್ ಮುಂದೆ ಇರೋ ಪೊಲೀಸ್ ಚೌಕಿ, ಸಿಗ್ನಲ್ ಎರಡೂ ಭಾಗವಾಗಿ ಕಿತ್ತೋಗಿದೆ. ಪೊಲೀಸ್ ಚೌಕಿ, ಸಿಗ್ನಲ್ ಕಂಬ ಬೀಳಿಸಿ ಚಾಲಕ ಎಸ್ಕೇಪ್ ಆಗಿದ್ದಾನೆ. ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಕುಡಿದು ಗಾಡಿ ಓಡಿಸಿರೋ ಶಂಕೆ ವ್ಯಕ್ತವಾಗಿದ್ದು, ಕಬ್ಬನ್ ಪಾರ್ಕ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.