ಬೆಂಗಳೂರು : ಸಿಎಂ ಸರ್ಕಾರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಕನ್ನಡ ಚಲನಚಿತ್ರ ನಿರ್ದೇಶಕರ ನಿಯೋಗ ಭೇಟಿ ಮಾಡಿ, ಕರ್ನಾಟಕದಲ್ಲಿ ನೂತನ ಚಲನಚಿತ್ರ ನೀತಿ ರೂಪಿಸುವಂತೆ ಮನವಿ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ಭೇಟಿಗಾಗಿ ಇಂದು ಕನ್ನಡ ಚಿತ್ರ ರಂಗದ ನಿರ್ದೇಶಕ ಟಿ.ಎನ್.ಸೀತಾರಾಂ, ಲಿಂಗದೇವರು, ಗಿರೀಶ್ ಕಾಸರವಳ್ಳಿ, ಪಿ.ಶೇಷಾದ್ರಿ ನಟಿ ಜಯಮಾಲಾ ಭಾಗಿಯಾಗಿದ್ದರು. ಸಿಎಂ ಭೇಟಿ ಸಂದರ್ಭದಲ್ಲಿ ಹಲವು ವಿಚಾರಗಳನ್ನು ಚರ್ಚೆ ನಡೆಸಿದ್ದಾರೆ, ಅಲ್ಲದೇ 2011 ರ ಬಳಿಕ ಚಲನಚಿತ್ರ ನೀತಿ ಪರಿಷ್ಕರಣೆ ಆಗಿಲ್ಲ. ಚಲನಚಿತ್ರ ರಂಗ ಸಾಕಷ್ಟು ಅಭಿವೃದ್ಧಿಯಾಗಿರುವ ಹಿನ್ನೆಲೆ ಹೊಸ ತಂತ್ರಜ್ಞಾನ, ಡಿಜಿಟಲೀಕರಣ ಹಿನ್ನೆಲೆ ಹೊಸ ನೀತಿ ಅನಿವಾರ್ಯವಾಗಿದೆ ಈ ನಿಟ್ಟಿನಲ್ಲಿ ಚಲನಚಿತ್ರ ನೀತಿ ರಚನೆಗೆ ತಜ್ಞರು ಸಮಿತಿ ರಚಿಸುವಂತೆ ನಿಯೋಗದಿಂದ ಮನವಿಯನ್ನು ಮಾಡಲಾಗಿದೆ. ಕನ್ನಡ ಚಲನಚಿತ್ರ ನಿರ್ದೇಶಕರ ನಿಯೋಗ ಭೇಟಿ ಮಾಡಿದಾಗ ಸಕಾರಾತ್ಮಕವಾಗಿ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ ಎಂದೆನ್ನಲಾಗಿದೆ.