ಬೆಂಗಳೂರು : ದೂರದ ರಾಜ್ಯಗಳಿಂದ , ಬಂದು ಜೀವನ ಕಟ್ಟಿಕೊಳ್ಳಬೇಕು ಅಂತ ಮಳೆ, ಗಾಳಿ, ಬಿಸಿಲು ಅನ್ನದೆ ಡೆಲಿವರಿ ಬಾಯ್ ಗಳು ರಸ್ತೆಯಲ್ಲಿ ಹೊಟ್ಟೆಪಾಡಿಗಾಗಿ ಹಗಲು ರಾತ್ರಿ ದುಡಿಯುತ್ತಾರೆ. ಇವ್ರ ಕೆಲಸಕ್ಕೆ ಮೊಬೈಲ್ ಅತಿ ಅವಶ್ಯಕ. ಈ ಮೊಬೈಲ್ ಫೋನ್ ಗಳನ್ನೆ ದುಷ್ಕರ್ಮಿಗಳು ಟಾರ್ಗೆಟ್ ಮಾಡಿ ಮೊಬೈಲ್ ರಾಬರಿ ಮಾಡ್ತಿದ್ರು.
ಅದರಲ್ಲೂ ರಾತ್ರಿ ವೇಳೆ ಎಲೆಕ್ಟ್ರಿಕ್ ಬೈಕ್ನಲ್ಲಿ ಡೆಲಿವರಿ ಮಾಡುವ ಹುಡುಗರೇ ಟಾರ್ಗೇಟ್ ಇವರು ಹುಡುಗರು ಯುಲು(yulu) ನಂತಹ ಸಣ್ಣ ಎಲೆಕ್ಟ್ರಿಕ್ ಬೈಕ್ ಗಳ ಮುಂದೆ ಕ್ಲಿಪ್ ಹಾಕಿ ಮೊಬೈಲ್ ಸಿಕ್ಕಿಸುತ್ತಾರೆ.
ರೂಟ್ ಮ್ಯಾಪ್ ನೋಡಲು ಹೀಗೆ ಕ್ಲಿಪ್ ಹಾಕಿ ಸಿಕ್ಕಿಸಿಕೊಳ್ಳುವ ಡೆಲಿವರಿ ಬಾಯ್ ಗಳನ್ನ ಟಾರ್ಗೆಟ್ ಮಾಡಿ ಡೆಲಿವರಿ ಬಾಯ್ಸ್ ಗಳನ್ನ ಫಾಲೋ ಮಾಡಿ ಕ್ಷಣಾರ್ಧದಲ್ಲಿ ಹಿಂಬದಿಯಿಂದ ಬೈಕ್ನಲ್ಲಿ ಬಂದು ಮೊಬೈಲ್ ಎಗರಿಸಿ ಪರಾರಿಯಾಗುತ್ತಿದ್ರು. ಹಿಂದೆ ಸೆಕ್ಯೂರಿಟಿ ಕೆಲಸ ಮಾಡ್ತಿದ್ದ ಅಸ್ಸಾಂ ಮೂಲದ ರಾಕೇಶ್ ಹಾಗೂ ಮಲ್ಲಿಕ್ ಈ ಪ್ರಕರಣದ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸುದ್ದುಗುಂಟೆ ಪಾಳ್ಯ ದಲ್ಲಿ ಮೊಬೈಲ್ ಸುಲಿಗೆ ವೇಳೆ ಡೆಲಿವರಿ ತನ್ನ ಮೊಬೈಲದ ರಕ್ಷಿಸಿಕೊಳ್ಳಲು ಹೋಗಿ ಬೈಕ್ ನಿಂದ ಸ್ಕಿಡ್ ಆಗಿ ಬಿದ್ದು ಕೈ ಮುರಿದುಕೊಂಡಿದ್ದ. ನಂತರ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ.
ಪ್ರಕರಣವನ್ನ ಗಂಭೀರವಾಗಿ ಪೊಲೀಸ್ರು ವಿಶೇಷ ತಂಡ ರಚಿಸಿ ಆರೋಪಿಗಳ ಬಂಧಿಸವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ವಿಚಾರಣೆ ವೇಳೆ ಬರೊಬ್ಬರಿ 32 ಮೊಬೈಲ್ ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಿದ್ದು ಸದ್ಯ 25 ಮೊಬೈಲ್ ರಿಕವರಿ ಮಾಡಿದ್ದಾರೆ.ಕಷ್ಟಪಟ್ಟು ದುಡಿದು ತಿನ್ನುವ ಡೆಲಿವರಿ ಬಾಯ್ಸ್ ಸ್ವಲ್ಪ ಹುಷಾರಾಗಿರಿ.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್