ಬೆಂಗಳೂರು : ನಮ್ಮ ಕಾರ್ಯಕರ್ತರನ್ನ ಸರಿಯಾಗಿ ಮಲಗೋಕೆ ಬಿಡಲಿಲ್ಲ ಜನರು ವಿಶ್ವಾಸ ಇಟ್ಟು ನಂಬಿಕೆ ಇಟ್ಟು ಮತ ಹಾಕಿದ್ದಾರೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ಆರೋಪದ ವಿಚಾರವಾಗಿ ಸದಾಶಿವನಗರದಲ್ಲಿ ಪ್ರತಿಕ್ರಿಯಿಸಿ ಅವರ ಖುಷಿಗೆ ಅವರು ಮಾತಾನಾಡಿದ್ದಾರೆ, ಶ್ರಮ ತಗೊಂಡು ಮಾತನಾಡಿದ್ದಾರೆ. ರೆಸ್ಟ್ ತಗೊಂಡು ಬಂದಿದ್ದಾರೆ ಒಳ್ಳೆದಾಗಲಿ ಐ ವಿಶ್ ಹಿಮ್ ಆಲ್ ದ ಬೆಸ್ಟ್ ಎಂದರು.ಇನ್ನೂ ಆರ್ ಆರ್ ನಗರದಲ್ಲಿ ಅಧಿಕಾರಿಗಳನ್ನ ವರ್ಗಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಆರ್ ಆರ್ ನಗರ ವಿಚಾರದಲ್ಲಿ ನಾನು ಯಾವುದೆ ಶಿಫಾರಸ್ಸು ಮಾಡಿಲ್ಲ.ಡಿ.ಕೆ.ಸುರೇಶ್ ಕೇಳಿ ವರ್ಗಾವಣೆ ಹೇಳೋಕೆ ನನಗೆ ತಲೆ ಕೆಟ್ಟಿದೆಯಾ..? ಐ ಆಮ್ ಎ ಗೌರ್ಮೆಂಟ್ ಐಸೆ ಐ ಆಮ್ ಎ ಗೌರ್ಮೆಂಡ್, ಬಹಳ ಸಂತೋಷ ಅವರ ಆಶೀರ್ವಾದ ನಮಗೆ ಬಹಳ ಮುಖ್ಯ ಅವರ ಮಾರ್ಗದರ್ಶನ ನಮಗೆ ಬಹಳ ಮುಖ್ಯ ಎಂದರು.
ಇನ್ನೂ ಚುನಾವಣೆಯಲ್ಲಿ ಮಾಯಾ ಮಂತ್ರ ಮಾಡಿ ಗೆದ್ದಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ ಮಾಯಾನೋ ಮಾಟಾನೋ ಜ್ಯೋತಿಷ್ಯ ನೋ, ಧರ್ಮಾನೋ ಶ್ರಮಾನೋ, ಫಲ, ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ.ಶ್ರಮ ಪಟ್ಟು ೩ ವರ್ಷ ಸರಿಯಾಗಿ ನಿದ್ರೆ ಮಾಡಲಿಲ್ಲ ಊಟ ಮಾಡಲಿಲ್ಲ.ನಮ್ಮ ಕಾರ್ಯಕರ್ತರನ್ನ ಸರಿಯಾಗಿ ಮಲಗೋಕೆ ಬಿಡಲಿಲ್ಲ ಜನರು ವಿಶ್ವಾಸ ಇಟ್ಟು ನಂಬಿಕೆ ಇಟ್ಟು ಓಟ್ ಹಾಕಿದ್ದಾರೆ.ಅಧಿಕಾರ ಕೊಟ್ಟಿದ್ದಾರೆ ಅವರ ಋಣ ತೀರಿಸಬೇಕು.ಪಾಪಾ ಮಾತಾಡಲಿ ಬಿಡಿ ಅವರದೆ ಆದ ಅನುಭವ ಇದೆಯಲ್ಲ ಮಾತಾನಾಡ್ತಾ ಇರಬೇಕು. ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು ಎಂದು ಕುಮಾರಸ್ವಾಮಿ ಆರೋಪಕ್ಕೆ ವ್ಯಂಗ್ಯವಾಗಿ ಉತ್ತರಿಸಿದ್ರು.
ವರದಿ : ಬಸವರಾಜ ಹೂಗಾರ