ಬೆಂಗಳೂರು : ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಾಟೆ ಪ್ರಕರಣದ ಅಮಾಯಕರನ್ನು ಕಾಪಾಡ್ತೀವಿ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೊದಲು ಡಿಕೆಶಿ ಕಾನೂನು ಚೌಕಟ್ಟು ಬಗ್ಗೆ ತಿಳಿದುಕೊಳ್ಳಲಿ. ಡಿಕೆಶಿ ಕಾಂಗ್ರೆಸ್ ಅಧ್ಯಕ್ಷರು, ಅವರು ಜಡ್ಜ್ ಯಾವಾಗ ಆದ್ರು? ಅಮಾಯಕರು ಅಂತ ಹೇಳೋಕೆ ಇವರೇನು ನ್ಯಾಯಾಧೀಶರಾ? ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿ ಹಾಗೆ ಕಾಣ್ಸತ್ತೆ. ಒಂದೇ ವರ್ಗದವರು ಇವರಿಗೆ ಅಮಾಯಕರಾಗಿ ಯಾಕೆ ಕಾಣ್ತಾರೆ? ಬಾಂಬ್ ಬ್ಲಾಸ್ಟ್ ಮಾಡಿದ್ರೂ ಅಮಾಯಕರು, ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ರೂ ಅಮಾಯಕರು, ನಮ್ಮ ಬ್ರದರ್ಸ್ ಅಂತಾರೆ ಇವ್ರು ಇದನ್ನೆಲ್ಲ ಕಾಂಗ್ರೆಸ್ ಬಿಡಬೇಕು, ಕಾಂಗ್ರೆಸ್ ಯಾವಾಗ ಬುದ್ದಿ ಕಲಿಯುತ್ತೆ? ಇವರೆನ್ನೆಲ್ಲ ಅಮಾಯಕರು ಅಂತ ಸರ್ಟಿಫಿಕೇಟ್ ಕೊಟ್ಬಿಡ್ತೀರಿ. ಶ್ರೀರಾಮನ ಭಕ್ತರು ಮಾತ್ರ ಆರೋಪಿಗಳಾ? ಹಿಂದೂಗಳು ಮಾತ್ರ ಅಪರಾಧಿಗಳಾ ಇವರಿಗೆ? ಕಾಂಗ್ರೆಸ್ ನವ್ರಿಗೆ ಮಾನ ಮರ್ಯಾದೆ ಬರಲ್ಲ ಅಂತ ಕಾಣ್ಸತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.