ಬೆಂಗಳೂರು : ರಾಜ್ಯಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಆಗಮನ ವಿಚಾರವಾಗಿ ಸಚಿವ ಎಂ.ಬಿ.ಪಾಟೀಲ್ (Minister M B Patil) ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ನಮ್ಮ ರಾಜ್ಯ ಉಸ್ತುವಾರಿ ಆಗಮಿಸುತ್ತಿದ್ದಾರೆ, ಹತ್ತನೇ ತಾರೀಕು ಸಭೆ ಇದೆ. ಶಾಸಕರು, ಸಚಿವರು, ಎಂಎಲ್‌ಸಿಗಳು, ಜಿಲ್ಲಾಧ್ಯಕ್ಷರು ಎಲ್ಲರ ಜೊತೆಗೂ ಸುರ್ಜೇವಾಲ ಸಭೆ ಮಾಡ್ತಾರೆ. ಸಭೆ ಬಳಿಕ ಲೋಕಸಭೆ ತಯಾರಿಗಳ ಬಗ್ಗೆ ಸೂಚನೆ ಕೊಡಲಿದ್ದಾರೆ.
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಅರ್ಥ ಮಾಡಿಕೊಳ್ಳಿ, ಹೈದರಾಬಾದ್‌ಗೆ ಹಿಂದೆ ನಿಜಾಮರ ಕಾಲದಲ್ಲಿ ಬಳ್ಳಾರಿ ಸೇರಿ ಕೆಲ ಜಿಲ್ಲೆಗಳು ಇದ್ವು ವಿಜಯಪುರ, ಬೆಳಗಾವಿ, ಕಾರವಾರ, ಮುಂಬೈ ರಾಜ್ಯದಲ್ಲಿತ್ತು ಈ ಅರ್ಥದಲ್ಲಿ ಅವರು ಹೇಳಿದ್ದಾರೆ ಇದು ಸತ್ಯ. ರಾಜ್ಯಗಳ ಪುನರ್ ವಿಂಗಡಣಾ ಬಳಿಕ ಎಲ್ಲವೂ ಸರಿಹೋಗಿದೆ.
ರಾಜ್ಯಗಳ ಗಡಿ ವಿಚಾರದಲ್ಲಿ ನಮಗೆ ಮಹಾಜನ್ ವರದಿ ಅಂತಿಮ. ಈ ಹಿಂದೆ ಇತಿಹಾಸದಲ್ಲಿ ಇರೋದನ್ನ ಹೇಳಿದ್ದಾರೆ. ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಯಾವ ಯಾವ ಜಿಲ್ಲೆಗಳು ಇದ್ದವು ಅನ್ನೋದು ಗೊತ್ತಿದೆ ಆ ಕಾರಣದಿಂದ ಅವರು ಹೇಳಿರಬಹುದು. ರಾಜ್ಯ ಪುನರ್ ವಿಂಗಡಣೆ ಆದ್ಮೇಲೆ ಎಲ್ಲವೂ ಬದಲಾಗಿದೆ. ಎಲ್ಲಾ ಗಡಿ ವಿವಾದಕ್ಕೆ ಮಹಾಜನ್ ವರದಿ ಅಂತಿಮ ಈ ವಿಚಾರದಲ್ಲಿ ನಮ್ಮ ರಾಜ್ಯದ ನಿಲುವು ಕೂಡ ಬಹಳ ಸ್ಪಷ್ಟವಾಗಿದೆ ಎಂದಿದ್ದಾರೆ.