ಬೆಂಗಳೂರು : ಸರ್ಕಾರದಲ್ಲಿ ಅನುದಾನ ಕೊರೆತೆಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ವಿಧಾನಸೌಧದ ಆವರಣದಲ್ಲಿರುವ ದಿ.ಎಸ್. ನಿಜಲಿಂಗಪ್ಪ ಅವರ ಪುಣ್ಯತಿಥಿ ಅಂಗವಾಗಿ ಸಿಎಂ ಸಿದ್ದರಾಮಯ್ಯ ಅವರು ನಿಜಲಿಂಗಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ನಂತರ ಶಾಸಕರ ಜೊತೆ ಸಭೆ,ಅನುದಾನ ಕೊರೆತೆ ಆಗ್ತಾಯಿದಾಯಾ ಎಂಬ ಪ್ರಶ್ನೇಗೆ ಉತ್ತರಿಸಿದ ಅವರು ಅನುದಾನ ಕೊರೆತ ಇಲ್ಲ. ಅನುದಾನ ಕೊರೆತೆ ಇದ್ರೆ ಐದು ಗ್ಯಾರಂಟಿಗಳನ್ನ ಜಾರಿ ಮಾಡ್ತಾಯಿದ್ವಾ…? ಐದು ಗ್ಯಾರಂಟಿಗಳನ್ನ ಜಾರಿ ಮಾಡಿದ್ದೇವೆ. ಎಲ್ಲಾ ಇಲಾಖೆಗಳಿಗೂ ಅನುದಾನ ಕೊಟ್ಟಿದ್ದೇವೆ. ಐದು ಗ್ಯಾರಂಟಿಗಳಿಗೂ ಅನುದಾನವನ್ನ ಕೊಟ್ಟಿದ್ದೇವೆ.ಯಾವುದೇ ತೊಂದರೆ ಇಲ್ಲ.ಅಭಿವೃದ್ಧಿ ಕೆಲಸಗಳು ನಡಿತಾಯಿದ್ದಾವೆ. ಐದು ಗ್ಯಾರಂಟಿಗಳು ಜಾರಿ ಆಗುತ್ತವೆ ಎಂದು ಹೇಳಿದರು.
ಇನ್ನೂ ಉಡುಪಿ ಪ್ರಕರಣ ಸಿಐಡಿಗೆ ವಹಿಸಿರಿವುದು ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ ಎಂಬ ಬಿಜೆಪಿ ಆರೋಪದ ವಿಚರಾವಾಗಿ ಪ್ರತಿಕ್ರಿಯಿಸಿ ಪ್ರಕರಣವನ್ನು ಸಿಐಡಿಗೆ ಕೊಟ್ಟಿದೀವಿ.ಇದರ ಬಗ್ಗೆ ಆದೇಶವೂ ಆಗಿದೆ.ನಾವು ಡಿ ವೈ ಎಸ್ ಪಿ ಮಟ್ಟದ ಅಧಿಕಾರಿಗೆ ತನಿಖೆಗೆ ಕೊಟ್ಟಿದ್ವಿ. ಆದ್ರೆ ಇದರಲ್ಲಿ ಉನ್ನತ ಮಟ್ಟದ ತನಿಖೆಗೆ ಕೊಡಿ ಅಂತ ಒತ್ತಾಯ ಬಂತು.ಹೀಗಾಗಿ ಸಿಐಡಿಗೆ ಕೊಟ್ಟಿದ್ದೇವೆ.ಸಿಐಡಿಗೆ ಕೊಟ್ರೂ ಬೇಡ ಅಂತಾರೆ ಇವರು(ಬಿಜೆಪಿಯವ್ರು) ಇವರ ಕಾಲದಲ್ಲಿ ಸಿಐಡಿಗೆ ಕೊಟ್ಟಿರೋದೆಲ್ಲ ಮುಚ್ಚಿ ಹಾಕಿದ್ದಾರೆ ಅಂತ ಅರ್ಥನಾ..?. ಸಿಐಡಿಗೆ ತನಿಖೆಗೆ ವಿರೋಧಿಸಿದ ಬಿಜೆಪಿ ನಾಯಕರಿಗೆ ಸಿಎಂ ಟಾಂಗ್ ನೀಡಿದರು.
ಇನ್ನೂ ಬಿಬಿಎಂಪಿ ಕಾಮಗಾರಿಗಳ ಸ್ಥಗಿತ, ಗುತ್ತಿಗೆದಾರಿಂದ ರಾಜ್ಯಪಾಲರಿಗೆ ದೂರು ವಿಚಾರವಾಗಿ ಮಾತನಾಡಿ ಕೆಲಸ ನಿಲ್ಲಿಸಿಲ್ಲ,ತನಿಖೆ ಮಾಡಿಸ್ತಿದೀವಿ.ಅನೇಕ ದೂರುಗಳು ಬಂದಿವೆ.ಬಿಬಿಎಂಪಿ, ಬಿಡಿಎ ವ್ಯಾಪ್ತಿಯಲ್ಲಿ ಅನೇಕ ಕೆಲಸಗಳು ಆಗಿವೆ.ಇವುಗಳ ಸತ್ಯಾಸತ್ಯತೆ ತಿಳಿಯಲು ತನಿಖೆ ಮಾಡ್ತಿದೀವಿ ಎಂದು ಹೇಳಿದರು
ವರದಿ : ಬಸವರಾಜ ಹೂಗಾರ