ಬೆಂಗಳೂರು ಮಾಜಿ ಸಿಎಂ ಹೆಚ್.ಡಿ .ಕುಮಾರಸ್ವಾಮಿ ವಿದೇಶ ಪ್ರವಾಸ ಮುಗಿಸಿ ವಾಪಾಸ್ಸಾಗಿದ್ದ ಬೆನ್ನಲ್ಲೆ ಹೊಸ ಬಾಂಬ್ ಸಿಡಿಸಿದ್ದು, ಪೆನ್ ಡ್ರೈವ್ ಬಿಡುಗಡೆ ಮಾಡ್ತೀನಿ ಕ್ರಮಕೈಗೊಳ್ಳೋಕೆ ಸರ್ಕಾರಕ್ಕೆ ಧಮ್ ಇದ್ಯಾ ? ಹೆಚ್‌ಡಿಕೆ ಪ್ರಶ್ನೆ ಮಾಡಿದ್ದಾರೆ.
ಯುರೋಪ್ ಪ್ರವಾಸ ಮುಗಿಸಿ ಬೆಂಗಳೂರಿನ ಕೆಂಪೇಗೌಡ .ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಭರದಲ್ಲಿ ಸರ್ಕಾರದ ಭ್ರಷ್ಟಾಚಾರ, ಕಮೀಷನ್ ಸಂಗ್ರಹದ ಬಗ್ಗೆ ಗುರುತರ ಆರೋಪಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ಪೆನ್ ಡ್ರೈವ್ ಬಿಡುಗಡೆ ಮಾಡ್ತೀನಿ . ಸರ್ಕಾರಕ್ಕೆ ಧಮ್ ತಾಕತ್ತು ಇದ್ಯಾ? ಕ್ರಮ ತೆಗೆದುಕೊಳ್ಳೋಕೆ ಸರ್ಕಾರಕ್ಕೆ ಧಮ್ ತಾಕತ್ತು ಇದಿಯಾ? ಮಿಮಿಕ್ರಿ ಅಂತಾ ಮಾತಾಡ್ತಿರಾ? ಬಿಡುಗಡೆ ಮಾಡಿದ ಮೇಲೆ ಅಷ್ಟೇ ಎಂದಿದ್ದಾರೆ
ಅಲ್ಲದೇ, ನಾನು ಕೆಲವು ವಿಚಾರ ಪ್ರಸ್ತಾಪ ಮಾಡೋದು ಹುಡುಗಾಟಕ್ಕೆ ಅಲ್ಲ. ನಾನು ಹಿಟ್ ಆ್ಯಂಡ್ ರನ್ ಜಯಮಾನದ ವ್ಯಕ್ತಿ ನಾನಲ್ಲ. ಇದನ್ನು ಮುಖ್ಯಮಂತ್ರಿಗಳಿಗೆ ಹೇಳೋಕೆ ಬಯಸುತ್ತೇನೆ. ಹಿಟ್ ಆ್ಯಂಡ್ ರನ್ ಇದ್ದರೇ ಅದು ಕಾಂಗ್ರೆಸ್. ಹಿಂದೆ ನೀವು ಸಾಕಷ್ಟು ಆರೋಪ ಮಾಡಿದ್ದೀರಿ. ಆದರೆ ಒಂದಾದರೂ ದಾಖಲೆ ಬಿಡುಗಡೆ ಮಾಡಿದ್ದೀರಾ? ನಿಮ್ಮದೆ ಸರ್ಕಾರ ಇದೆ ದಾಖಲೆ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
ರೈತರ ಹೆಸರಿನಲ್ಲಿ ಕೋಟ್ಯಂತರ ಹಣ ಲೂಟಿ ಮಾಡಲಾಗಿದೆ. ನೈಸ್ ಹಗರಣ ಕುರಿತು ಎಲ್ಲಾ ದಾಖಲೆ ಸಂಗ್ರಹ ಮಾಡಿದ್ದೇನೆ. ದೆಹಲಿಯಲ್ಲಿ ಹಗರಣದ ದಾಖಲೆ ಬಿಡುಗಡೆ ಮಾಡುತ್ತೇನೆ. ಹಗರಣ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಮಾಡುತ್ತೇನೆ. ನಾನು ದಾಖಲೆ ನೀಡುತ್ತೇನೆ ರೈತರಿಗೆ ನ್ಯಾಯ ಕೊಡಿಸುತ್ತೀರಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿಕೆ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಈಸ್ಟ್ ಇಂಡಿಯಾ ಪಕ್ಷದಂತೆ ರಾಜ್ಯವನ್ನು ಲೂಟಿ ಮಾಡುತ್ತಿದೆ. ಪೊಲೀಸ್ ವರ್ಗಾವಣೆಯಲ್ಲಿ ವೈಎಸ್ ಟಿ ದಂಧೆಕೋರರು ಶಾಮೀಲಾಗಿದ್ದಾರೆ, ಬಿಡಿಎ ಅಧಿಕಾರಿಗಳಿಂದ 250 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಲಾಗಿದೆ ಎಂಬುದು ಮಾಜಿ ಮುಖ್ಯಮಂತ್ರಿ ಅವರು ಮಾಡಿರುವ ಗಂಭೀರ ಆರೋಪ ಮಾಡಿದ್ದಾರೆ. ನೈಸ್ ಹಗರಣದ ದಾಖಲೆ ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ. ರೈತರ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆದಿದ್ದೀರಿ. ಆ ಎಲ್ಲಾ ದಾಖಲೆ ಸಂಗ್ರಹ ಮಾಡಿದ್ದೇನೆ
ವರ್ಗಾವಣೆಯಲ್ಲಿ ಒಂದು ಸಾವಿರ ಕೋಟಿಗಿಂತ ಅಧಿಕ ಹಣ ಸಂಗ್ರಹ ಮಾಡಿದ್ದಾರೆ. ಒಂದೊಂದು ಪೋಸ್ಟ್ ಗೆ ಮೂರು ನಾಲ್ಕು ಜನಕ್ಕೆ ಲೆಟರ್ ಕೊಟ್ಟಿದ್ದಾರೆ. ವರ್ಗಾವಣೆ ಬಗ್ಗೆ ಮಾತನಾಡಲು ಅಸಹ್ಯ ಆಗುತ್ತೆ ಎಂದಿದ್ದಾರೆ.