ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರನ ಬ್ರಾಂಡ್ ಬೆಂಗಳೂರನ್ನಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ರಾಜ ಕಾಂಗ್ರೆಸ್ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಬಜೆಟ್ ಇಟ್ಟಿದೆ.
ಹೀಗಾಗಿ ಬೆಂಗಳೂರು ನಗರವನ್ನು ಮಾದರಿ ನಗರವನ್ನಾಗಿ ಮಾಡೋದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿರುವಂತದ್ದು, ಆದರೆ ನಗರದಲ್ಲಿ ಮೂಲಭೂತ ಸಮಸ್ಯೆಗಳು ಸಾಕಷ್ಟು ಇದ್ದು, ಅಂತಹ ಸಮಸ್ಯೆಗಳನ್ನು ಸರ್ಕಾರ ಮೊದಲು ಬಗೆಹರಿಸಬೇಕಿದೆ ಎಂದು ಸಾರ್ವಜನಿಕರು ಸಾಕಷ್ಟು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಂಗಳೂರಿನ ರಸ್ತೆಯಲ್ಲಿ ಜನ ಓಡಾಡಬೇಕಾದರೆ ತಮ್ಮ ಜೀವ ಕೈಯಲ್ಲಿ ಹಿಡ್ಕೊಂಡು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ. ಜನ ಮಾತ್ರವಲ್ಲದೆ, ವಾಹನ ಸವಾರರು ಕೂಡ ರಸ್ತೆಗಳ ಮೇಲೆ ಓಡಾಡುವುದಕ್ಕೆ ಭಯಪಡುತ್ತಿದ್ದಾರೆ.
ಈಗಾಗಲೇ ಐಟಿಸಿಟಿ ಬೆಂಗಳುರಿನ ನಗರದಲ್ಲೆಡೆ ಡ್ರೈನೇಜ್ ವಾಟರ್ ಚೇಂಬರ್‌ಗಳು ತಲೆಯೆತ್ತಿದ್ದು ಜನರು ಹಾಗೂ ವಾಹನ ಸವಾರರ ಪ್ರಾಣ ತೆಗೆಯಲು ಬಾಯಿ ತೆರೋದು ಕುಳಿತಿವೆ. ನಗರದ ಹಲವೆಡೆ ರಸ್ತೆಗಳಲ್ಲಿ ಅರ್ಧ ಮೀಟರ್ ಎತ್ತರದಲ್ಲಿ ಡ್ರೈನೇಜ್ ವಾಟರ್ ಮ್ಯಾನ್ ಹೋಲ್‌ಗಳನ್ನ ನಿರ್ಮಾಣ ಮಾಡಲಾಗಿದೆ. ಮತ್ತು ಇನ್ನು ಕೆಲವು ಕಡೆ ಕಳಪೆ ಕಾಮಗಾರಿಯಿಂದಾಗಿ ಮ್ಯಾನ್ ಹೋಲ್‌ಗಳು ರಸ್ತೆಯಿಂದ ಒಳಗೆ ಹೋಗಿದ್ದು ರಸ್ತೆಗಳ ಮೇಲೆ ಬೃಹತ್ ಗಾತ್ರದ ಗುಂಡಿಗಳು ಬಿದ್ದಿವೆ.
ಈ ಬಗ್ಗೆ ಸಾಕಷ್ಟು ಬಾರಿ ಜನ್ರು ಬಿಬಿಎಂಪಿ ಗಮನಕ್ಕೆ ತಂದರು ಕೂಡ ಅಧಿಕಾರಿಗಳು ಇದುವರೆಗೂ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಅಪಾಯ ಸಂಭವಿಸುವ ಮುನ್ನ ಮ್ಯಾನ್ ಹೋಲ್ ಗಳನ್ನ ಮುಚ್ಬೇಕು ಅಂತ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ