ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಸೋಮವಾರ ರಾತ್ರಿ (Former Chief Minister HD Kumaraswamy)ಕಾಂಬೋಡಿಯಾದ (Cambodia)ದೇಶದ ಫ್ನೊಮ್ ಪೆನ್ (Phnome Pen) ನಗರಕ್ಕೆ 4 ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ.
ಕಾಂಬೋಡಿಯಾದ ದೇಶದ ಒಳಾಡಳಿತ ಸಚಿವಾಲಯದ ಅಧಿಕೃತ ಆಹ್ವಾನದ ಮೇರೆಗೆ ಮಾಜಿ ಮುಖ್ಯಮಂತ್ರಿ HD ಕುಮಾರಸ್ವಾಮಿ ಇಂದು ತೆರಳಿದ್ದು, ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಒಳಾಡಳಿತ ಸಚಿವಾಲಯದ ಕಾರ್ಯದರ್ಶಿ ಜನರಲ್ ಡಾ. ಕೆಮ್ ಚೀಟ್ ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ ಡಾ. ಕೆಮ್ ಚೀಟ್ ಅವರ ಸಲಹೆಗಾರ ಡಾ. ಎಸ್.ಸರ್ಜುದ್ದಿನ್ ಅವರು ಹಾಜರಿದ್ದರು.
ಮಾಜಿ ಸಚಿವರಾದ ಶ್ರೀ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಶ್ರೀ ಮಂಜೇಗೌಡ, ಮಾಜಿ ಶಾಸಕ ಶ್ರೀ ಮಂಜುನಾಥ್, ಶ್ರೀ ಹೆಚ್.ಎಂ.ರಮೇಶ್ ಗೌಡ, ಶ್ರೀ ತೂಪಲ್ಲಿ ಚೌಡರೆಡ್ಡಿ ಮುಂತಾದವರು ಮಾಜಿ ಮುಖ್ಯಮಂತ್ರಿಗಳ ಜೊತೆ ಉಪಸ್ಥಿತರಿದ್ದಾರೆ,