ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇವತ್ತಿಗೆ ಆರನೇ ಗ್ಯಾರಂಟಿ ಜಾರಿಗೆ ತಂದಿದೆ. ಬೆಲೆ ಏರಿಕೆ ಮಾಡಿ ಜನರಿಗೆ ಟೋಪಿ ಹಾಕ್ತಿದೆ ಎಂದು ಸರ್ಕಾರದ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಮಾಜಿ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಐದು ಗ್ಯಾರಂಟಿ ಹೆಸರಲ್ಲಿ 75 ಸಾವಿರ ಕೋಟಿ ಜನರಿಂದ ಸುಲಿಗೆ ಮಾಡ್ತಾ ಇದ್ದಾರೆ. 50 ಸಾವಿರ ಕೊಡೋಕೆ ಹೋಗಿ 75 ಸಾವಿರ ಕೋಟಿ ಟೋಪಿ ಹಾಕಿದೆ. ಇದನ್ನ ನಾವು ಖಂಡಿಸುತ್ತೇವೆ, ನಾವು ಒಪ್ಪುವುದಿಲ್ಲ ಎಂದಿದ್ದಾರೆ.
ಇನ್ನೂ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡೋರ ಟಿಕೆಟ್‌ಗೆ ಎಸ್ಸಿ, ಎಸ್ಟಿ ಹಣ ಬಳಕೆ ಆಗ್ತಿದೆ. ಉಚಿತ ವಿದ್ಯುತ್ ಕೊಡ್ತೀವಿ ಅಂತ ಅದಕ್ಕೂ ಎಸ್ಸಿ, ಎಸ್ಟಿ ಹಣ ಬಳಕೆ ಮಾಡ್ತಿದಾರೆ. ಎಸ್.ಸಿ.ಮಹಾದೇವಪ್ಪ ಹೋರಾಟಗಾರರು, ಅವರು ಎಸ್ಸಿ, ಎಸ್ಟಿ ಹಣ ಬೇರೆ ಉದ್ದೇಶಕ್ಕೆ ಬಳಸೋದನ್ನು ಒಪ್ಪಿಕೊಳ್ಳಬಾರದು. ಹೆಚ್.ಸಿ. ಮಹಾದೇವಪ್ಪನವರು ದಲಿತರ ಕಲ್ಯಾಣ ನಿಧಿ ಬೇರೆ ಕಡೆ ಬಳಸುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.
ಮಹದೇವಪ್ಪನವರು ಸುಮ್ನೆ ರಾಜಕಾರಣಕ್ಕೆ ಬಂದವರಲ್ಲ. ದಲಿತ ಸಮಿತಿ ಹೋರಾಟಗಾರರು. ಅವರು ಯಾಕೆ ಒಪ್ಪಿಕೊಂಡ್ರು ಗೊತ್ತಿಲ್ಲ. ಇದನ್ನ ಯಾವುದೇ ಕಾರಣಕ್ಕೂ ಮಹದೇವಪ್ಪನವರು ಒಪ್ಪಿಕೊಳ್ಳಬಾರದು. ಮಾಧ್ಯಮದಲ್ಲಿ ನೋಡಿದ್ದೀನಿ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ ಅಂತಾ ಬರುತ್ತಿದೆ. ಹಾಗಾಗಿ ಮಹದೇವಪ್ಪ ನವರು ಇದಕ್ಕೆ ಒಪ್ಪಬಾರದು ಎಂದು ಒತ್ತಾಯ ಮಾಡ್ತೀನಿ ಎಂದಿದ್ದಾರೆ.