ಚಿತ್ರದುರ್ಗ: ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕನ ವಿರುದ್ಧ ಆರೋಪದ ಪಟ್ಟಿಯೇ ಕೇಳಿಬಂದಿದ್ದು ಚಿತ್ರದುರ್ಗ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಜಿ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ ಅವರ ವಿರುದ್ಧ ವಿವಿಧ ಕಾಮಗಾರಿಗಳ ಹಣ ದುರ್ಬಳಕೆ ಆರೋಪ ಕೇಳಿ ಬಂದಿದೆ. ಸದ್ಯ ಪೊಲೀಸರು ಮೂಡಲಗಿರಿಯಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೂಡಲಗಿರಿ ಯಪ್ಪ ಅವರ ವಿರುದ್ಧ ನಕಲಿ ದಾಖಲೆ ಸೃಷಿಸಿ ₹7 ಕೋಟಿ ಲಪಟಾಯಿಸಿದ ಆರೋಪ, ಬೇನಾಮಿ ವ್ಯಕ್ತಿಗಳ ಹೆಸರಲ್ಲಿ ಚೆಕ್ ನೀಡಿ ಹಣ ಗುಳುಂ ಆರೋಪ ಕೇಳಿ ಬಂದಿದೆ.
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸತ್ಯನಾರಾಯಣರಾವ್ ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ಬಳಿಕ ಚಿತ್ರದುರ್ಗದ ಸಿಇಎನ್ ಪೊಲೀಸ್ ಠಾಣೆಗೆ ಈ ಪ್ರಕರಣ ವರ್ಗಾವಣೆಯಾಗಿದ್ದು ಪೊಲೀಸರು ಮೂಡಲಗಿರಿಯಪ್ಪ ಅವರನ್ನು ಬಂಧಿಸಿದ್ದಾರೆ. ನಿರ್ಮಿತಿ ಕೇಂದ್ರದ ಹಣ ಲಪಟಾಯಿಸಿದ ಪ್ರಕರಣದಲ್ಲಿ ಮೂಡಲಗಿರಿಯವರು ವಜಾಗೊಂಡಿದ್ದರು. ತಿಂಗಳ ಹಿಂದಷ್ಟೇ ಕೆಲಸದಿಂದ ವಜಾಗೊಳಿಸಲಾಗಿತ್ತು. ನಿನ್ನೆ ಮೂಡಲಗಿರಿಯಪ್ಪ ವಿರುದ್ಧ ಮತ್ತೊಂದು ದೂರು ಹಿನ್ನೆಲೆ ಈಗ ಬಂಧಿಸಲಾಗಿದೆ.