ಬೆಂಗಳೂರು: ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಜೀನ್ ಥೆರಪಿ ಆರಂಭವಾಗ್ತಿದೆ. ವಿದೇಶದಲ್ಲಿ ಪ್ರಸಿದ್ಧಿ ಇರುವ ಈ ಥೆರಪಿ ಇದೇ ಮೊದಲು ಭಾರತಕ್ಕೆ ಕಾಲಿಟ್ಟಿದ್ದು, ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಈ ಥೆರಪಿ ಮೊದಲ ಬಾರಿಗೆ ಪ್ರಯೋಗ ಮಾಡಲಾಗುತ್ತಿದೆ ಎಂದು ನಾರಾಯಣ ನೇತ್ರಾಲಯ ಅಧ್ಯಕ್ಷ ಪ್ರೊ. ಡಾ. ರೋಹಿತ್ ಶೆಟ್ಟಿ ತಿಳಿಸಿದರು.
ನಾರಾಯಣ ನೇತ್ರಾಲಯದ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣ ನೇತ್ರಾಲಯದಲ್ಲಿ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಅನುವಂಶಿಕ ಅಂದ್ರೆ ಒಂದೇ ಕುಟುಂಬದ ಗಂಡು, ಹೆಣ್ಣು ಮದುವೆಯಾದ್ರೆ ಮಕ್ಕಳಲ್ಲಿ ತೊಂದರೆ ಕಾಣಿಸುತ್ತೆ. ಅಂದ್ರೆ ಕುರುಡುತನ, ದೃಷ್ಟಿಗೆ ಸಂಬಂಧಿಸಿದಂತೆ ಹುಟ್ಟಿದ ಮಕ್ಕಳಿಗೆ ಹಲವು ಸಮಸ್ಯೆ ಎದುರಾಗುತ್ತೆ. ಈ ಸಮಸ್ಯೆಗೆ ಪರಿಹಾರವೇ ಜೀನ್ ಥೆರಪಿಯಾಗಿದೆ. ಇದರಲ್ಲಿ ಮಕ್ಕಳ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ ಎಂದರು.
ಈ ಬಗ್ಗೆ ನಾರಾಯಣ ನೇತ್ರಾಲಯ ಇಂದು ಪ್ರಯೋಗ ಮಾಡಿ ತೋರಿಸಿದೆ. ನೇತ್ರಾಲಯದ ಅಡಿಟೊರಿಯಂನಲ್ಲಿ ಹಮ್ಮಿಕೊಂಡ ಗ್ರೋ(GROW) ಪ್ರಯೋಗ, 10 ವರ್ಷಗಳ ನಿರಂತರ ಪ್ರಯತ್ನ ಅದಕ್ಕೆ ಇಂದು ಯಶಸ್ಸು ಸಿಕ್ಕಿದೆ. 70 ಲಕ್ಷಕ್ಕೂ ಹೆಚ್ಚು ಜನರು ಜೀನ್ ಸಮಸ್ಯೆಗೆ ಒಳಗಾಗುತ್ತಾರೆ. ಇದಕ್ಕೆ ಈ ಥೆರಪಿಯಿಂದ ಪರಿಹಾರ ಸಾದ್ಯ. ಈ ಥೆರಪಿಗೆ ಹೆಚ್ಚು ಹಣ ಬೇಕಾಗುತ್ತದೆ. ಆದ್ರೆ ಇದರ ಖರ್ಚಿನ ಬಗ್ಗೆ ಸರ್ಕಾರ ಜೊತೆ ಮಾತನಾಡುತ್ತಿದ್ದೇವೆ ಎಂದರು.
ಈ ಪ್ರಯೋಗಾಲಯ ರೆಡಿ ಮಾಡಲು 4 ವರ್ಷ ಹಿಡಿಯಿತು. ಡಾ.ಭುಜಂಗಯ್ಯ ಶೆಟ್ರು ಅಗಲಿದ ನಂತರ ನಾರಾಯಣ ನೇತ್ರಾಲಯದಲ್ಲಿ ನಡೆದ ಮೊದಲ ಸುದ್ದಿಗೋಷ್ಠಿ ಇದಾಗಿದೆ ಎಂದರು.
ಇನ್ನು ಸುದ್ದಿಗೋಷ್ಠಿಯಲ್ಲಿ ನುರಿತ ತಜ್ಞರಾದ ಡಾ.ನರೇಶ್ ಶೆಟ್ಟಿ, ಡಾ.ಅರ್ಕಶುಭ್ರ ಘೋಶ್, ಡಾ. ನರೇನ್ ಶೆಟ್ಟಿ, ಡಾ. ಮೇಜರ್ ನರೇಂದ್ರ ಪಿ ಉಪಸ್ಥಿತರಿದ್ದರು.