ಬೆಳಗಾವಿ : ಕರ್ನಾಟಕದಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಭಾರತದ ನಯಾಗರ ಜಲಪಾತ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಜಲಪಾತ(Gokak falls) ಉಕ್ಕಿ ಹರಿಯುತ್ತಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಜಲಪಾತ ಹಾಲುನೊರೆಯಂತೆ ಮೈದುಂಬಿ ದುಮ್ಮಿಕ್ಕುವ ಸೌಂದರ್ಯಕ್ಕೆ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ. ಅಲ್ಲದೇ ಈ ಮನಮೋಹಕ ಸೌಂದರ್ಯಕ್ಕೆ ಪ್ರವಾಸಿಗರು, ಪೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೇ ಜಲಪಾತದ ಸೌಂದರ್ಯ ಕಣ್ಣು ಕುಕ್ಕುವ ಜಲಧಾರೆಗೆ ಪೊಲೀಸ್ ಇಲಾಖೆ ಹೊಸ ಕ್ರಮಕ್ಕೆ ಮುಂದಾಗಿದ್ದು, ಜಲಪಾತಕ್ಕೆ ತೆರಳುವ ದಾರಿಯುದ್ದಕ್ಕೂ ಬ್ಯಾರಿಕೇಟ್ ಹಾಕಿ ಸೆಲ್ಪಿಗೆ ತೆಗೆದುಕೊಳ್ಳಲು ಹುಚ್ಚಾಟ ಮೆರೆಯದಂತೆ ಬಂದೋಬಸ್ತ್ ಒದಗಿಸಲಾಗಿದೆ.