ಬೆಂಗಳೂರು : ಆಗಸ್ಟ್ 1ರಿಂದಲೇ ನಂದಿನಿ ಹಾಲಿನ ಬೆಲೆ 3 ರೂಪಾಯಿ ಏರಿಕೆ ಮಾಡಲಾಗಿದೆ, ಈ ಬೆನ್ನಲ್ಲೆ ಇದೀಗ ಹಾಲಿನ ಪ್ರಮಾಣ ಇಳಿಕೆ ಮಾಡಿದ್ದು ಗ್ರಾಹಕರಿಗೆ ಹೊಸ ರೀತಿ ಶಾಕ್ ನೀಡಿದಂತಾಗಿದೆ.
ಈ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶುಕ್ರವಾರ ಸಂಜೆ ಟ್ವೀಟ್ ಮಾಡಿ ಗಂಭೀರ ಆರೋಪ ಮಾಡಿದ್ದು ,ಕೆಎಂಎಫ್ ನಂದಿನಿ ಹಾಲಿನ ಅರ್ಧ ಲೀಟರ್ ಪ್ಯಾಕೇಟ್‌ನಲ್ಲಿ 450 ಮಿಲೀ ಹಾಲು ನೀಡಲಾಗುತ್ತಿದೆ. ನಂದಿನಿ ಹಾಲಿನ ಪ್ಯಾಕೇಟ್ ಪೋಟೊವನ್ನು ಹಂಚಿಕೊಂಡಿದ್ದಾರೆ.ಜತೆಗೆ ಕಾಂಗ್ರೆಸ್ ಮುಖಂಡರಿಗೆ ಎಲ್ಲೆಲ್ಲಿ ಹೇಗೇಗೆ ಮೋಸ ಮಾಡುವ ಚೆನ್ನಾಗಿ ಗೊತ್ತಿದೆ. ನಂದಿನಿ ಹಾಲಿನ ಬೆಲೆ ಏರಿಕೆ ಮಾಡಿದ್ದಲ್ಲದೆ, ಹಾಲಿನ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ , ಹೀಗೂ ಮೋಸ ಮಾಡಬಹುದೆಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
ಈ ಬಳಿಕ ಜನ ಸಾಮಾನ್ಯರು ಹಾಲಿನ ಅರ್ಧ ಲೀಟರ್ ಪ್ಯಾಕೇಟ್‌ನಲ್ಲಿ 450 ಮಿಲೀ ಹಾಲುನೀಡಿರೋದನ್ನು ಯಾರೊಬ್ಬರು ತಕ್ಷಣಕ್ಕೆ ಗಮನಿಸಿಲ್ಲ ಅನ್ನೋದನ್ನು ಮೇಲ್ನೋಟಕ್ಕೆ ತಿಳಿಯಬಹುದಾಗಿದೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಾಲಿನ ಬೆಲೆ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಕುರಿತು ಭಾರೀ ಚರ್ಚೆಯಾಗುತ್ತಿದೆ. ಈ ಬಗ್ಗೆ ಯಾವುದೇ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದಲ್ಲದೇ, ಬೆಲೆ ಏರಿಕೆ ಬಿಸಿಯನ್ನು ತಟ್ಟುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೆ ಹಾಲಿನ ದರ, ತರಕಾರಿ ದರವನ್ನು ಗಗನಕ್ಕೇರಿಸಲಾಗಿದೆ ಈ ಬಗ್ಗೆ ಜನ ಸಾಮಾನ್ಯರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.