ಬೆಂಗಳೂರು : ಕಾಂಗ್ರೆಸ್ ಸರ್ಕಾರ ಇದೀಗ ಆಟೋ ಮತ್ತು ಮ್ಯಾಕ್ಸಿ ಕ್ಯಾಬ್ ಡ್ರೈವರ್‌ಗಳ ಹಿತಕ್ಕಾಗಿ ಒಂದು ಹೊಸ ಪ್ಲಾನ್‌ಗೆ ಮುಂದಾಗಿದೆ. ಸಾರಿಗೆ ಇಲಾಖೆ ಶೀಘ್ರದಲ್ಲೇ ಹೊಸ ಆಪ್ ಪರಿಚಯಿಸಲು ರೆಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಟೋ ಮತ್ತು ಕ್ಯಾಬ್ ಡ್ರೈವರ್‌ಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್ ನೀಡಲಿದೆ.
ಈಗಾಗಲೇ ಆಪ್ ಆಧಾರಿತ ಸಾರಿಗೆ ಸೇವೆ ನೀಡುತ್ತಿರುವ ಕೆಲವು ಖಾಸಗಿ ಸಂಸ್ಥೆಗಳು ಆಟೋ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗಿಂತ ಹೆಚ್ಚಿನ ಲಾಭ ಗಳಿಸುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರಿನಲ್ಲಿ ಕೆಲವೇ ತಿಂಗಳಲ್ಲಿ ಹೊಸ ಆಪ್ ಗೆ ಚಾಲನೆ ಸಿಗಲಿದೆ.
ಈ ಹಿಂದೆ ಆಟೋ ಯೂನಿಯನ್‌ಗಳು ಸಾರಿಗೆ ಸಂಸ್ಥೆಯಿಂದ ಒಂದು ಆಪ್ ಸಿದ್ಧಪಡಿಸುವಂತೆ ಒತ್ತಾಯಿಸಿದ್ದವು. ಆಟೋ ಯೂನಿಯನ್‌ಗಳ ಸಭೆಯಲ್ಲೂ ಸರ್ಕಾರವೇ ಆಪ್ ಮಾಡಬೇಕೆಂಬ ಬೇಡಿಕೆ ಇತ್ತು. ಆ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಆಪ್ ಸಿದ್ಧಪಡಿಸಲು ಒಪ್ಪಿಗೆ ನೀಡಲಾಗಿದೆ.
ಹೊಸ ಆಪ್‌ನಲ್ಲಿ ಆಟೋ, ಟ್ಯಾಕ್ಸಿ ಸೇರಿ ಎಲ್ಲ ಸಾರಿಗೆ ವ್ಯವಸ್ಥೆಯನ್ನು ಅಳವಡಿಕೆ ಮಾಡುವಂತೆ ಸೂಚನೆ ನೀಡಿದ್ದು, ಈಗಾಗಲೇ ಖಾಸಗಿ ಸಂಸ್ಥೆಗಳು ಅಧಿಕ ಹಣ ಪಡೆದು ಚಾಲಕರಿಗೆ ಕಡಿಮೆ ಹಣ ನೀಡುತ್ತಿವೆ. ಗ್ರಾಹಕರಿಗೆ 850 ರೂಪಾಯಿ ಚಾರ್ಜ್ ಮಾಡಿದರೆ ಡ್ರೈವರ್‌ಗಳಿಗೆ 450 ರೂಪಾಯಿ ಸಿಗುತ್ತಿದ್ದು, ನೋ ಲಾಸ್, ನೋ ಪ್ರಾಫಿಟ್ ಕಾನ್ಸೆಪ್ಟ್ ನಲ್ಲಿ ಆಪ್ ಪರಿಚಯಿಸಲು ಪ್ಲಾನ್ ಮಾಡಲಾಗುತ್ತಿದೆ.
ಇನ್ನು ನಾಲ್ಕೈದು ತಿಂಗಳಲ್ಲಿ ಆಯಪ್ ಸಿದ್ಧವಾಗಲಿದೆ.
ಸಾರ್ವಜನಿಕರು ಸಂಜೆ ಅಥವಾ ರಾತ್ರಿ ವೇಳೆ ಪ್ರಯಾಣಿಸಿದರೆ ಡಬಲ್ ಹಣ ನೀಡಬೇಕಾಗುವ ವ್ಯವಸ್ಥೆಗೆ ಬ್ರೇಕ್ ಹಾಕಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
ವರದಿ – ಹರ್ಷಿತಾ ಪಾಟೀಲ