ಬೆಂಗಳೂರು : ಮೆಟ್ರೋ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಬಿಎಮ್‌ಆರ್‌ಸಿಎಲ್ (BMRCL) ನ ನೇರಳೆ ಮಾರ್ಗ ಯಶಸ್ವಿಯಾಗಿದೆ.
ಬೈಯಪ್ಪನಹಳ್ಳಿಯಿಂದ ಕೆಆರ್.ಪುರವರೆಗೆ ಮೊದಲ ಮೆಟ್ರೋ ರೈಲು ಸಂಚಾರ ಯಶಸ್ವಿಯಾಗಿದ್ದು, ನಿನ್ನೆ ಸಂಜೆ 6:05ನಿಮಿಷಕ್ಕೆ ಪ್ರಾರಂಭಿಸಿದ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೋ ಎಂದು ಬಿಎಮ್‌ಆರ್‌ಸಿಎಲ್ (BMRCL) ಮಾಹಿತಿ ನೀಡಿದೆ.
ಈ ಬಗ್ಗೆ ವಿಡಿಯೋ ಮಾಡಿ ಟ್ವೀಟ್ ಮಾಡಿರುವ ಬಿಎಂಆರ್ ಸಿಎಲ್ ಅಧಿಕಾರಿಗಳು, ಕೆ.ಆರ್ ಪುರ ಟು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಮಾರ್ಗವಾಗಿ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಸಧ್ಯ 25 ಕಿ.ಮೀ ವೇಗದಲ್ಲಿ ಪ್ರಾಯೋಗಿಕ ಕಾರ್ಯವನ್ನು ಮೆಟ್ರೋ ಬೋಗಿ ಆರಂಭಿಸಿದೆ.
ಅಂದು ಕೊಂಡಂತೆ ಆದ್ರೆ ಆಗಸ್ಟ್ ತಿಂಗಳ ಕೊನೆಯಲ್ಲಿ ವಾಣಿಜ್ಯ ಸಂಚಾರ ಸಾಧ್ಯತೆ ಇದ್ದು, ಈ ಮೂಲಕ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಬಹು ನಿರೀಕ್ಷಿತ ಮೆಟ್ರೋ ಮಾರ್ಗಕ್ಕೆ ಕೆಲವೇ ದಿನಗಳಲ್ಲಿ ಹಸಿರು ನಿಶಾನೆ ದೊರಕಲಿದೆ.