ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಜೋಡಿಯ ಹಸೆಮಣೆ ಏರೋಕೆ ರೆಡಿಯಾಗಿದ್ದು, ಆಗಸ್ಟ್ 24 ಕ್ಕೆ ಹೊಸ ಬಾಳಿಗೆ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಕಾಲಿಡಲಿದ್ದಾರೆ.
ಕೊಡವ ಸಂಪ್ರದಾಯದಂತೆ ಇವರಿಬ್ಬರ ಮದುವೆ ನಡೆಯಲಿದೆ.ಇವರ ಅದ್ದೂರಿ ಮದುವೆ ಸಿನಿ ರಂಗ ಬಹುತೇಕ ಎಲ್ಲರೂ ಶುಭಾಯಶಗಳನ್ನು ಕೋರಿದ್ದಾರೆ.
6 ವರ್ಷದಿಂದ ಪ್ರೀತಿಯಲ್ಲಿರುವ ಜೋಡಿ ಇದೀಗ ಮನೆಮಂದಿಯ ಒಪ್ಪಿಗೆಯಂತೆ ಕೊಡವ ಸಂಪ್ರದಾಯದಂತೆ ಕೊಡಗಿನ ಅಂಬತ್ತಿ ಕೊಡವ ಸಮಾಜದಲ್ಲಿ ಸಪ್ತಪದಿ ನಟಿ ಹರ್ಷಿಕಾ ಪೂಣಚ್ಚ ತುಳಿಯಲಿದ್ದಾರೆ.
ಈ ವಿಚಾರವನ್ನು ಇದೀಗ ತಾಯ್ತ ಸಿನಿಮಾದ ಆಡಿಯೋ ಲಾಂಚ್ ವೇಳೆ ಹರ್ಷಿಕಾ ಪೂಣಚ್ಚ ಹಂಚಿಕೊಂಡಿದ್ದಾರೆ. ಇವರಿಬ್ಬರ ವಿವಾಹ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.